ADVERTISEMENT

ಪೋತೆ, ಇಂದುಮತಿ ಸೇರಿ ಆರು ಮಂದಿಗೆ ‘ಕಸಾಪ ದತ್ತಿ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 14:36 IST
Last Updated 29 ಜುಲೈ 2023, 14:36 IST
ಎಚ್‌.ಟಿ.ಪೋತೆ
ಎಚ್‌.ಟಿ.ಪೋತೆ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಎಚ್.ಟಿ. ಪೋತೆ, ಇಂದುಮತಿ ಲಮಾಣಿ ಸೇರಿ ಆರು ಮಂದಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಒಳಗೊಂಡಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತ್ಯ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

2018ನೇ ಸಾಲಿಗೆ ಕೋಲಾರದ ಕೋಟಿಗಾನಹಳ್ಳಿ ರಾಮಯ್ಯ, 2019ನೇ ಸಾಲಿಗೆ ಕಲಬುರಗಿಯ ಎಚ್.ಟಿ. ಪೋತೆ, 2020ನೇ ಸಾಲಿಗೆ ವಿಜಯಪುರದ ಇಂದುಮತಿ ಲಮಾಣಿ, 2021ನೇ ಸಾಲಿಗೆ ಬೆಂಗಳೂರಿನ ಕಾ.ವೆಂ. ಶ್ರೀನಿವಾಸಮೂರ್ತಿ, 2022ನೇ ಸಾಲಿಗೆ ಗದಗದ ಅರ್ಜುನ ಗೊಳಸಂಗಿ ಹಾಗೂ 2023ನೇ ಸಾಲಿಗೆ ಹಾಸನದ ನಾಗರಾಜ ಹೆತ್ತೂರು ಆಯ್ಕೆಯಾಗಿದ್ದಾರೆ. 

ADVERTISEMENT
ಇಂದುಮತಿ ಲಮಾಣಿ
ಕೋಟಿಗಾನಹಳ್ಳಿ ರಾಮಯ್ಯ
ಕಾ.ವೆಂ. ಶ್ರೀನಿವಾಸಮೂರ್ತಿ
ಅರ್ಜುನ ಗೊಳಸಂಗಿ
ನಾಗರಾಜ ಹೆತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.