ADVERTISEMENT

‘ಕುಲಶೇಖರಿ’ ಎಂದೇ ಪ್ರಸಿದ್ಧರಾಗಿದ್ದ ಲೇಖಕಿ ಉಷಾದೇವಿ ನಿಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 21:07 IST
Last Updated 27 ಜನವರಿ 2026, 21:07 IST
ಕುಲಶೇಖರಿ
ಕುಲಶೇಖರಿ   

ಬೆಂಗಳೂರು: ಕುಲಶೇಖರಿ ಎಂದೇ ಪ್ರಸಿದ್ಧರಾದ ಲೇಖಕಿ ಉಷಾದೇವಿ (86) ಮಂಗಳವಾರ ನಿಧನರಾದರು.

ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.

ಅವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಸದಸ್ಯರಾಗಿ, 47 ವರ್ಷಗಳಿಂದ ಸಂಘದೊಂದಿಗೆ ಒಡನಾಟ ಇರಿಸಿಕೊಂಡಿದ್ದರು.

ADVERTISEMENT

ಕ್ಷಿತಿಜ, ಸಂಕಲ್ಪ, ಬಿಕ್ಕುಗಳು, ಶತರಂಜ, ಏಕಲ ಮುಂತಾದ ಕವನ ಸಂಕಲನಗಳು, ಇರುವುದೊಂದೇ ಜೀವ (ಕಾದಂಬರಿ), ಮಂಗಲ ಮಾಂಗಲ್ಯ (ನಾಟಕ), ಅಳಿದ ಗೆಳತಿಗೆ ಉಳಿದ ನೆನಪು (ಜೀವನ ಚರಿತ್ರೆ), ನಾನೇನೂ ಅಲ್ಲ ಮತ್ತು ಎಲ್ಲರಂತಲ್ಲ (ಆತ್ಮಚರಿತ್ರೆ) ಸೇರಿ ಅವರ ಹಲವು ಕೃತಿಗಳು ಪ್ರಕಟಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.