ADVERTISEMENT

ನೆಲಮಂಗಲ: ರೋಟರಿಯಿಂದ ಕರುನಾಡ ಸೊಬಗು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 19:50 IST
Last Updated 27 ನವೆಂಬರ್ 2025, 19:50 IST
ರಘುನಾಥ ಚ.ಹ.
ರಘುನಾಥ ಚ.ಹ.   

ನೆಲಮಂಗಲ: ಜಿಲ್ಲಾ ಮತ್ತು ಸ್ಥಳೀಯ ರೋಟರಿ ಸಂಸ್ಥೆ ವತಿಯಿಂದ ಶುಕ್ರವಾರ ಸಂಜೆ 5 ಗಂಟೆಗೆ ಅರಿಶಿನಕುಂಟೆಯ ಸಿ.ಕೆ.ಪ್ಯಾಲೇಸ್‌ ಕಲ್ಯಾಣಮಂಟಪದಲ್ಲಿ ‘ಕರುನಾಡ ಸೊಬಗು‘ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಅಭಿಮತ ಸಂಪಾದಕ ರಘುನಾಥ.ಚ.ಹ ಅವರ ಮುಖ್ಯ ಭಾಷಣ ಇರಲಿದೆ. 90ಕ್ಕೂ ಹೆಚ್ಚು ರೋಟರಿ ಸಂಸ್ಥೆಗಳು ಭಾಗವಹಿಸಲಿವೆ. ನಾಡಿನ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲಾ ಪಾಲಕರಾದ ಎಲಿಜಬತ್ ಚೆರಿಯನ್, ಅಂತರಾಷ್ಟ್ರೀಯ ರೋಟರಿ ನಿರ್ದೇಶಕರಾದ ಕೆ.ಪಿ.ನಾಗೇಶ್, ಸಮಿತಿ ಅಧ್ಯಕ್ಷರಾದ ಸಿ.ಜಿ.ಮಂಜುನಾಥ್ ಗೌಡ, ಕಾರ್ಯದರ್ಶಿ ಆರ್.ರವಿಕುಮಾರ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT