ADVERTISEMENT

ಜಾಗ ನೋಂದಣಿಗೆ ಕಸಾಪ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 18:04 IST
Last Updated 7 ನವೆಂಬರ್ 2020, 18:04 IST

ಬೆಂಗಳೂರು: ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಮೈಸೂರು ವಿಶ್ವವಿದ್ಯಾಲಯವು ನೀಡಿರುವ ಜಾಗದ ನೋಂದಣಿ ಕಾರ್ಯವನ್ನು ತ್ವರಿತವಾಗಿ ನಡೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಒತ್ತಾಯಿಸಿದೆ. ‌

ಈ ಬಗ್ಗೆ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಹಾಗೂ ಅಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ವೆಂಕಟೇಶಪೂರ್ತಿ ಅವರಿಗೆ ಪತ್ರ ಬರೆದಿದ್ದಾರೆ.

‘ಅಧ್ಯಯನ ಕೇಂದ್ರಕ್ಕಾಗಿ ವಿಶ್ವವಿದ್ಯಾಲಯವು 4 ಎಕರೆ ಜಾಗ ನೀಡಿದೆ. ಭಾಷಾ ಸಂಸ್ಥಾನವು ವಿಶ್ವವಿದ್ಯಾಲಯದೊಂದಿಗೆ ಆದ್ಯತೆಯ ಮೇರೆಗೆ ಒಡಂಬಡಿಕೆ ಮಾಡಿಕೊಂಡು, ಜಾಗ ನೋಂದಣಿ ಕಾರ್ಯವನ್ನು ತ್ವರಿತವಾಗಿ ಪೂರೈಸಬೇಕು. ಈಗಾಗಲೇ ಕೇಂದ್ರದ ನಿರ್ಮಾಣ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದ್ದು, ಇನ್ನಷ್ಟು ತಡ ಮಾಡಬಾರದು’ ಎಂದು ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.