ADVERTISEMENT

ಕೆ.ಆರ್.ಪುರ: ವಿಜೃಂಭಣೆಯ ಶ್ರೀಕಾಟೇರಮ್ಮದೇವಿ ಕುಂಭಾಭಿಷೇಕ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:43 IST
Last Updated 2 ಮೇ 2025, 15:43 IST
ಶ್ರೀಕಾಟೇರಮ್ಮದೇವಿಯ ದೇವಸ್ಥಾನ
ಶ್ರೀಕಾಟೇರಮ್ಮದೇವಿಯ ದೇವಸ್ಥಾನ   

ಕೆ.ಆರ್.ಪುರ: ಕಾಡುಗೋಡಿ ಸಮೀಪದ ಸಾದರಮಂಗಲದಲ್ಲಿರುವ ಶ್ರೀಕಾಟೇರಮ್ಮದೇವಿಯ ಪುನರ್‌ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಸಾದರಮಂಗಲದ ರೈಲ್ವೆ ಹಳಿ ಬಳಿ ಇರುವ ಶ್ರೀಕಾಟೇರಮ್ಮದೇವಿಯ ದೇವಸ್ಥಾನವನ್ನು ಸಾದರಮಂಗಲ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ. 

ಮಹೋತ್ಸವದ ಅಂಗವಾಗಿ ಎರಡು ದಿನಗಳಿಂದ ದೇವಾಲಯಕ್ಕೆ ದೀಪಾಲಂಕಾರ ಮಾಡಲಾಗಿತ್ತು. ಕಾಟೇರಮ್ಮದೇವಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪ್ರತಿಷ್ಠಾಪನೆ ಅಂಗವಾಗಿ ಹೋಮ, ಹವನ, ವಿಶೇಷ ಪೂಜಾ ಕೈಂಕರ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿತು. ಪಾಂಡವಪುರ ತಾಲೂಕು ಕೆಬೆಟ್ಟಹಳ್ಳಿಯ ಮಹಾಸಂಸ್ಥಾನ ಮಠದ ಶ್ರೀ ವಿಜಯ ಕಾಳಿಯ ಪವಾಡ ಬಸಪ್ಪ(ಬಸವ) ಪಾಲ್ಗೊಂಡಿತ್ತು. ಈ ವೇಳೆ ಬಸಪ್ಪನಿಗೆ ಭಕ್ತರು ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.

ADVERTISEMENT

ಸಾದರಮಂಗಲ, ಕಾಡುಗುಡಿ ಬೆಳತ್ತೂರು, ಕೊಡಿಗೇಹಳ್ಳಿ, ಕುಂಬೇನ ಆಗ್ರಹಾರ, ಹೂಡಿ ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು. ಮಾಜಿ ಸಚಿವ ಹೆಚ್.ನಾಗೇಶ್ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.