ADVERTISEMENT

ಖೇಲೊ ಇಂಡಿಯಾ: ಬಿಎಂಟಿಸಿ ಬೆಂಗಳೂರು ದರ್ಶನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 20:27 IST
Last Updated 23 ಏಪ್ರಿಲ್ 2022, 20:27 IST
   

ಬೆಂಗಳೂರು: ಖೇಲೊ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗಾಗಿ ‘ವಿಶೇಷ ಬೆಂಗಳೂರು ದರ್ಶಿನಿ’ ಸಾರಿಗೆ ಸೇವೆಯನ್ನು ಬಿಎಂಟಿಸಿ ಆರಂಭಿಸಿದೆ.

ಮೂರು ಪ್ಯಾಕೇಜ್‌ಗಳಲ್ಲಿ ಬೆಂಗಳೂರಿನ ದರ್ಶನ ಮಾಡಿಸಲು ಬಿಎಂಟಿಸಿ ಉದ್ದೇಶಿಸಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 9 ಗಂಟೆಗೆ ಹೊರಡುವ ಬಸ್‌ ಇಸ್ಕಾನ್ ದೇವಸ್ಥಾನ, ವಿಧಾನಸೌಧ, ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡಗಣಪತಿ ದೇವಸ್ಥಾನ, ಲಾಲ್‌ಬಾಗ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌, ಸರ್. ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಉದ್ಯಾನ ವೀಕ್ಷಣೆ ಮಾಡಿಸಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮರಳಲಿದೆ. ₹420 ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

ಕನಕಪುರ ರಸ್ತೆಯಲ್ಲಿರುವಆರ್ಟ್‌ ಆಫ್ ಲಿವಿಂಗ್‌ನಿಂದ ಬೆಳಿಗ್ಗೆ 8.40ಕ್ಕೆ ಹೊರಡುವ ಬಸ್ ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡಗಣಪತಿ ದೇವಸ್ಥಾನ, ಇಸ್ಕಾನ್ ದೇವಸ್ಥಾನ, ವಿಧಾನಸೌಧ, ಲಾಲ್‌ಬಾಗ್, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ವೀಕ್ಷಣೆ ಮಾಡಿಸಿ ಆರ್ಟ್‌ ಆಫ್ ಲಿವಿಂಗ್‌ಗೆ ಮರಳಲಿದೆ. ₹500 ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

ADVERTISEMENT

ಕನಕಪುರ ರಸ್ತೆಯ ಜೈನ್ ಕಾಲೇಜ್‌ ಆವರಣದಿಂದ ಬೆಳಿಗ್ಗೆ 8.30ಕ್ಕೆ ಹೊರಡುವ ಬಸ್‌, ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡಗಣಪತಿ ದೇವಸ್ಥಾನ, ವಿಧಾನಸೌಧ, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಉದ್ಯಾನ, ಲಾಲ್‌ಬಾಗ್ ವೀಕ್ಷಣೆ ಮಾಡಿಸಿ ಜೈನ್‌ ಕಾಲೇಜ್‌ ಆವರಣಕ್ಕೆ ಮರಳಿ ಕರೆತರಲಿದೆ. ₹600ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

ಒಂದೇ ಸ್ಥಳದಿಂದ 15ಕ್ಕಿಂತ ಹೆಚ್ಚು ಜನ ಆಸನಗಳನ್ನು ಕಾಯ್ದಿರಿಸಿದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬೆಂಗಳೂರಿನ ದರ್ಶನ ಮಾಡಿಸಿ ಅದೇ ಸ್ಥಳಕ್ಕೆ ವಾಪಸ್ ಇಳಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.