ADVERTISEMENT

ನವೆಂಬರ್‌ 22ಕ್ಕೆ ವಿಶ್ವ ಕ್ಷತ್ರಿಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 13:51 IST
Last Updated 22 ಅಕ್ಟೋಬರ್ 2018, 13:51 IST

ಬೆಂಗಳೂರು: ಈ ಬಾರಿಯ ವಿಶ್ವ ಕ್ಷತ್ರಿಯ ಸಮ್ಮೇಳನಕಾಂಬೋಡಿಯಾದಲ್ಲಿ ನವೆಂಬರ್‌ 22 ರಿಂದ 27ರ ತನಕ ನಡೆಯಲಿದೆ.

ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕ್ಷತ್ರಿಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಲ್‌.ಕೆ.ರಾಜು, ‘ವಿದೇಶಗಳಲ್ಲಿರುವ ಭಾರತೀಯ ಕ್ಷತ್ರಿಯರನ್ನು ಒಗ್ಗೂಡಿಸುವ ಉದ್ದೇಶದಿಂದ ಕಾಂಬೋಡಿಯಾದಲ್ಲಿ ಸಮ್ಮೇಳನ ಆಯೋಜಿಸಿದ್ದೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕ್ಷತ್ರಿಯ ಸಮುದಾಯಗಳು ವಿವಿಧ ಹೆಸರುಗಳ ಮೂಲಕ ಸಣ್ಣ ಸಣ್ಣ ಸಮುದಾಯಗಳಾಗಿ ಚದುರಿ ಹೋಗಿದ್ದು, ಹಲವು ಹೆಸರುಗಳಲ್ಲಿ ಅಸ್ತಿತ್ವ ಪಡೆದುಕೊಂಡಿವೆ. ದೇಶದ ಸುಮಾರು 15 ಕೋಟಿಗೂ ಅಧಿಕವಾಗಿರುವ ಕ್ಷತ್ರಿಯ ಸಮಾಜ, ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಕಡೆಗಣಿಸಲ್ಪಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸಮ್ಮೇಳನದಲ್ಲಿ, ಸಮುದಾಯದಕಡೆಗಣನೆಗೆ ಕಾರಣ ಹಾಗೂ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚಾಗೋಷ್ಠಿಗಳು ನಡೆಯಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.