ADVERTISEMENT

ವ್ಯವಸ್ಥಾಪಕನ ಅಪಹರಿಸಿ ₹ 10 ಲಕ್ಷಕ್ಕೆ ಬೇಡಿಕೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 20:17 IST
Last Updated 28 ಜೂನ್ 2023, 20:17 IST
   

ಬೆಂಗಳೂರು: ಸಂಸ್ಥೆಯೊಂದರ ವ್ಯವಸ್ಥಾಪಕನ ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಅಪಹರಣಕಾರರನ್ನು ಜ್ಞಾನಭಾರತಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕೇಶವಮೂರ್ತಿ (32), ಮದನ್ (28), ಸೂರ್ಯ (21) ಹಾಗೂ ಪ್ರೇಮ್‌ ಬಾಬು(21) ಬಂಧಿತ ಆರೋಪಿಗಳು.

ಕೆಂಚನಪುರ ಕ್ರಾಸ್‌ನಲ್ಲಿರುವ ಸಂತೋಷ್‌ ಸೋಶಿಯಲ್‌ ಸರ್ವಿಸ್‌ ಸೊಸೈಟಿ (ರಿಯಾಬಿಲಿಟೇಷನ್‌) ಸೆಂಟರ್‌ ಮಾಲೀಕನಿಗೆ ಕರೆ ಮಾಡಿ ₹ 10 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಆ ಹಣವನ್ನು ಮಾಲೀಕರು ಕೊಡಲು ನಿರಾಕರಿಸಿದ್ದರಿಂದ 8 ಮಂದಿಯ ಗುಂಪು ಸಂಸ್ಥೆಯ ಬಳಿಗೇ ಬಂದು ಮಾಲೀಕರು ಎಲ್ಲಿ ಬಂದು ವಿಚಾರಿಸಿದ್ದರು. ಮಾಲೀಕರು ಇಲ್ಲ ಎಂದಾಗ, ಆರೋಪಿಗಳು ಸಂಸ್ಥೆಯ ವ್ಯವಸ್ಥಾಪಕನನ್ನೇ ಅಪಹರಿಸಿದ್ದರು. ಮಾಲೀಕನಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಕರಣ ದಾಖಲಿಸಿಕೊಂಡ ಜ್ಞಾನಭಾರತಿ ಠಾಣೆ ಪೊಲೀಸ್ ಮೊಬೈಲ್‌ ಲೊಕೇಷನ್‌ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ನಂಜನಗೂಡು ಬಸ್ ನಿಲ್ದಾಣದ ಬಳಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

₹ 6.50 ಲಕ್ಷದ ಬೈಕ್‌ ಜಪ್ತಿ:

ರಸ್ತೆಗಳ ಬದಿಯಲ್ಲಿ ನಿಲುಗಡೆ ಮಾಡಿದ್ದ ಬೈಕ್‌ಗಳ ಹ್ಯಾಂಡಲ್‌ ಲಾಕ್‌ ಮುರಿದು 7 ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬ್ಯಾಡರಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಚಂದ್ರಾಲೇಔಟ್ ಹಾಗೂ ಜ್ಞಾನಭಾರತಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡಿದ್ದರು. ಬಂಧಿತರಿಂದ ₹ 6.50 ಲಕ್ಷದ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮ್ ಬಾಬು
ಮದನ್‌
ಸೂರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.