ADVERTISEMENT

ರೈಲು ನಿಲ್ದಾಣಗಳ ಮೂಲ ಸೌಕರ್ಯ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:19 IST
Last Updated 24 ಸೆಪ್ಟೆಂಬರ್ 2021, 22:19 IST

ಕೆ.ಆರ್.ಪುರ: ರೈಲು ಪ್ರಯಾಣಿಕರ ಸೌಕರ್ಯ ಸಮಿತಿಯ ತಂಡವು ವೈಟ್‌ಫಿಲ್ಡ್ ಮತ್ತು ಕೆ.ಆರ್.ಪುರ ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಿತು.

ಕುಡಿಯುವ ನೀರು, ಶೌಚಾಲಯ, ಟಿಕೆಟ್ ಕೌಂಟರ್, ಪ್ಲಾಟ್ ಫಾರಂ, ಕ್ಯಾಂಟೀನ್, ವಿದ್ಯುತ್ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿತು.

‘ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯ ಸೌಲಭ್ಯ ಒದಗಿಸಲು ತಂಡ ಪರಿಶೀಲನೆ ನಡೆಸಿದೆ. ಎರಡೂ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ ಎದ್ದುಕಾಣುತ್ತಿದೆ. ಪ್ರಯಾಣಿಕರಿಗಾಗಿ ಹೆಚ್ಚು ಟಿಕೆಟ್ ಕೌಂಟರ್, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಿತಿಯ ಅಧ್ಯಕ್ಷ ಪಿ.ಕೆ.ಕೃಷ್ಣದಾಸ್ ಹೇಳಿದರು.

ADVERTISEMENT

‘ಪ್ರಯಾಣಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಪ್ಲಾಟ್‌ಫಾರಂ ತೆರಳುವ ಸ್ಕೈ ವಾಕ್ ನಿರ್ಮಾಣ ಸೌಲಭ್ಯ ಒದಗಿಸಲು ಅಧ್ಯಕ್ಷರಿಗೆ ಮನವರಿಕೆ ಮಾಡಲಾಗಿದೆ’ ಎಂದು ಸಮಿತಿ ಸದಸ್ಯ ಪಿ.ಮಧುಸೂದನ ತಿಳಿಸಿದರು.

ಸಮಿತಿಯ ಸದಸ್ಯರಾದ ಪಿ.ಮಧುಸೂದನ್ ಕಲ್ಕೆರೆ, ಡಾ‌.ಜಿ.ವಿ.ಮಂಜುನಾಥ್, ಕೆ.ರವಿಚಂದ್ರನ್, ನಿರ್ಮಾಲಾ ಕಿಶೋರ್, ಗುತ್ತಾಲ ಉಮರಾಣಿ, ಕಲ್ಲೇಶ್ ಲಕ್ಷ್ಮಣ್ ವರ್ಮಾ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.