ADVERTISEMENT

ಕೆಎಸ್‌ಆರ್‌ಟಿಸಿ: ಅಂತಿಮ ಆಯ್ಕೆ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 19:37 IST
Last Updated 13 ಜೂನ್ 2025, 19:37 IST
   

ಬೆಂಗಳೂರು: ಚಾಲಕ ಕಂ ನಿರ್ವಾಹಕರ 2000 ಹುದ್ದೆಗಳ‌ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಅಂಕಗಳ ವಿವರಗಳನ್ನು ಕೆ‌ಎಸ್‌ಆರ್‌ಟಿಸಿ ಪ್ರಕಟಿಸಿದೆ.

ಸಂಭವನೀಯ ಆಯ್ಕೆಪಟ್ಟಿಗೆ ಸ್ವೀಕರಿಸಿರುವ ಆಕ್ಷೇಪಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಶಾಂತಿನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ಮತ್ತು ನಿಗಮದ ವೆಬ್‌ಸೈಟ್‌ ksrtcjobs.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಆಯಾ ಪ್ರವರ್ಗದಲ್ಲಿ ಸ್ಥಾನ ಪಡೆದ ಕೊನೆಯ ಅಭ್ಯರ್ಥಿ ಪಡೆದ ಅಂಕ, ಹುಟ್ಟಿದ ದಿನಾಂಕವನ್ನು ನೀಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ನಿಗಮದ ನಿರ್ದೇಶಕರು ತಿಳಿಸಿದ್ದಾರೆ.

ಜೂನ್‌ 16ರಿಂದ 19ರವರೆಗೆ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಗಣಕೀಕೃತ ಕೌನ್ಸೆಲಿಂಗ್‌ ನಡೆಯಲಿದೆ. ಅಭ್ಯರ್ಥಿಗಳನ್ನು ಜೇಷ್ಠತೆ ಅನುಸಾರ ವಿಭಾಗ, ಘಟಕಗಳಿಗೆ ನೇರವಾಗಿ ನಿಯೋಜನೆ ಮಾಡಲಾಗುವುದು. ಕೌನ್ಸೆಲಿಂಗ್ ದಿನಾಂಕ ಮತ್ತು ಸಮಯವನ್ನು ಅಭ್ಯರ್ಥಿಗಳಿಗೆ ಎಸ್‌ಎಂಎಸ್‌ ಮೂಲಕ ತಿಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.