ADVERTISEMENT

ಕೆಎಸ್‌ಆರ್‌ಟಿಸಿ: ಇಟಿಎಂ ಸ್ಲಿಟಿಂಗ್ ಯಂತ್ರಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 18:54 IST
Last Updated 14 ಸೆಪ್ಟೆಂಬರ್ 2020, 18:54 IST
ಇಟಿಎಂ ಸ್ಲಿಟಿಂಗ್ ಯಂತ್ರಗಳನ್ನು ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಉದ್ಘಾಟಿಸಿದರು. ನಿಗಮದ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕ ಟಿ.ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.
ಇಟಿಎಂ ಸ್ಲಿಟಿಂಗ್ ಯಂತ್ರಗಳನ್ನು ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಉದ್ಘಾಟಿಸಿದರು. ನಿಗಮದ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕ ಟಿ.ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.   

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮುದ್ರಣಾಲಯದಲ್ಲಿ ಪ್ಲಾಸ್ಟಿಕ್ ಕೊಳವೆ ರಹಿತ ಟಿಕೆಟ್ ರೋಲ್ ತಯಾರಿಸುವ ಎರಡು 'ಇಟಿಎಂ ಸ್ಲಿಟಿಂಗ್' (ಎಲೆಕ್ಟ್ರಾನಿಕ್ ಟಿಕೆಟಿಂಗ್) ಯಂತ್ರಗಳಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, 'ಪ್ರತಿ ಯಂತ್ರದ ಬೆಲೆ ₹10 ಲಕ್ಷ. ಇವು ಸಂಪೂರ್ಣ ಸ್ವದೇಶಿ ಯಂತ್ರಗಳಾಗಿವೆ. ಇದರಿಂದ ತಯಾರಾಗುವ ಥರ್ಮಲ್ ರೋಲ್‍ಗಳಲ್ಲಿ ಪ್ಲಾಸ್ಟಿಕ್ ಕೊಳವೆ (ಪೈಪ್) ಉಪಯೋಗಿಸುವುದಿಲ್ಲ. ನಿರ್ವಾಹಕರು ವಿದ್ಯುತ್‍ಚಾಲಿತ ಟಿಕೆಟ್ ಯಂತ್ರಗಳಲ್ಲಿ ಈ ರೋಲ್ ಬಳಸಿ, ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಾರೆ' ಎಂದರು.

'ನಿಗಮ ಮತ್ತು ಅದರ ಅಂಗ ಸಂಸ್ಥೆಗಳಿಗೆ ಪ್ರತಿ ವರ್ಷ 1.50 ಕೋಟಿ ರೋಲ್‍ಗಳು ಖಾಸಗಿಯವರಿಂದ ಸರಬರಾಜಾಗುತ್ತಿತ್ತು. ಅದರಲ್ಲಿದ್ದ ಪ್ರತಿ ಪ್ಲಾಸ್ಟಿಕ್ ಕೊಳವೆಗೆ 50 ಪೈಸೆಯಂತೆ, ವಾರ್ಷಿಕ ₹75 ಲಕ್ಷ ಖರ್ಚಾಗುತ್ತಿತ್ತು. ಈ ಯಂತ್ರಗಳಿಂದ ದಿನಕ್ಕೆ 16 ಸಾವಿರ ರೋಲ್‍ಗಳನ್ನು ತಯಾರಿಸಬಹುದು. ಇದರಿಂದ ಸಂಸ್ಥೆಗೆ ವಾರ್ಷಿಕ ₹4.80 ಕೋಟಿ ಉಳಿತಾಯವಾಗಲಿದೆ' ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.