ADVERTISEMENT

ಹೀಯಾಳಿಸಿದ್ದಕ್ಕೆ ಕೊಲೆ; ಕುಣಿಗಲ್ ಗಿರಿ ಸೆರೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 20:31 IST
Last Updated 7 ಡಿಸೆಂಬರ್ 2020, 20:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನ. 7ರಂದು ನಡೆದಿದ್ದ ಕಾರು ಚಾಲಕ ಮಂಜುನಾಥ್ ಎಂಬುವರ ಕೊಲೆ ಪ್ರಕರಣ ಸಂಬಂಧ ಕುಖ್ಯಾತ ಕಳ್ಳ ಕುಣಿಗಲ್‌ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ.

‘‍ಪ್ರಕರಣದ ಆರೋಪಿ ಸೈಕೊ ವಿಶ್ವನಾಥ್ ಎಂಬಾತನನ್ನು ಕಾಲಿಗೆ ಗುಂಡಿಕ್ಕಿ ಸೆರೆ ಹಿಡಿಯಲಾಗಿತ್ತು.
ಪ್ರಕರಣದಲ್ಲಿ ಕುಣಿಗಲ್ ಗಿರಿ ಪಾತ್ರವಿದ್ದ ಸಂಗತಿ ಗೊತ್ತಾಗಿತ್ತು. ಇದೀಗ ಗಿರಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಜಯನಗರ ನಿವಾಸಿಯಾಗಿದ್ದ ವಿಶ್ವನಾಥ್, ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ. ಆತನಿಗೆ ಕುಣಿಗಲ್ ಗಿರಿಯೇ ಜಾಮೀನು ಕೊಡಿಸಿ ಹೊರಗೆ ಕರೆತಂದಿದ್ದ. ಹೀಗಾಗಿ, ಇಬ್ಬರ ನಡುವೆ ಆತ್ಮಿಯತೆ ಇತ್ತು.’

ADVERTISEMENT

‘ಪರಿಚಯಸ್ಥರೇ ಆಗಿದ್ದ ಮಂಜುನಾಥ್ ಹಾಗೂ ಕುಣಿಗಲ್ ಗಿರಿ ನಡುವೆ ವೈಷಮ್ಯ ಬೆಳೆದಿತ್ತು. ಗಿರಿ ಬಗ್ಗೆ ಸ್ನೇಹಿತರ ಬಳಿ ಮಂಜುನಾಥ್ ಹೀಯಾಳಿಸಿ ಮಾತನಾಡಿದ್ದರು. ಒಂದು ಗತಿ ಕಾಣಿಸುವುದಾಗಿಯೂ ಹೇಳಿದ್ದರು. ಅದು ತಿಳಿಯುತ್ತಿದ್ದಂತೆ ಗಿರಿ, ಸೈಕೊ ವಿಶ್ವನಾಥ್‌ಗೆ ವಿಷಯ ತಿಳಿಸಿದ್ದ. ಮಂಜುನಾಥ್‌ನಿಗೆ ಬೆದರಿಕೆ ಹಾಕಿ ಬುದ್ದಿ ಕಲಿಸುವಂತೆ ಸೂಚಿಸಿದ್ದ’ ಎಂದೂ ಅಧಿಕಾರಿ ತಿಳಿಸಿದರು.

‘ಬೆದರಿಸಲು ಹೋಗಿದ್ದ ಸೈಕೊ ವಿಶ್ವನಾಥ್, ಮಂಜುನಾಥ್ ಅವರಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.