ADVERTISEMENT

ದಲಿತರಲ್ಲಿ ಆಂತರಿಕ ಸಂಘಟನಾ ಶಕ್ತಿ ಕೊರತೆ: ಸಿಗದ ಪರಿಹಾರ

ಕಾರ್ಯಾಗಾರದಲ್ಲಿ ಸಾಹಿತಿ ದಾಸನೂರು ಕೂಸಣ್ಣ ಬೇಸರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 20:00 IST
Last Updated 23 ಆಗಸ್ಟ್ 2022, 20:00 IST
ಭಾರತ ವಿಶ್ವವಿದ್ಯಾಲಯದ ತಳ ಸಮುದಾಯಗಳ ಅಧ್ಯಯನ ಕೇಂದ್ರ ಮಂಗಳ ವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ರಾಷ್ಟ್ರೀಯ ಕಾನೂನು ಶಾಲೆಯ ಕುಲಸಚಿವ ಪ್ರೊ. ನಿಗಮ್ ನುಗ್ಗೇಹಳ್ಳಿ ಉದ್ಘಾಟಿಸಿದರು. ಡಾ.ಬಾಬು ಜಗಜೀವನ್ ರಾಂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಅರುಣ್ ಫುರ್ಟಾಡೊ, ನಿವೃತ್ತ ಐಎಎಸ್‌ ಅಧಿಕಾರಿ ಇ.ವೆಂಕಟಯ್ಯ, ಸಾಹಿತಿ ದಾಸನೂರು ಕೂಸಣ್ಣ, ಮೈಲಳ್ಳಿ ರೇವಣ್ಣ, ಆರ್. ವಿ. ಚಂದ್ರಶೇಖರ್ ಇದ್ದಾರೆ   –ಪ್ರಜಾವಾಣಿ ಚಿತ್ರ

ಬೆಂಗಳೂರು: ಆಂತರಿಕ ಸಂಘಟನಾ ಶಕ್ತಿಯ ಕೊರತೆಯಿಂದಾಗಿ ಶತಮಾನ ಗಳು ಕಳೆದರೂ ದಲಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಾಹಿತಿ ದಾಸನೂರು ಕೂಸಣ್ಣ ಬೇಸರ ವ್ಯಕ್ತಪಡಿಸಿದರು.

ನಾಗರಭಾವಿ ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯಗಳ ಅಧ್ಯಯನ ಕೇಂದ್ರ, ಡಾ.ಬಾಬು ಜಗ ಜೀವನ್‌ ರಾಂಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಮಾದಿಗ ಮತ್ತು ಅದರ ಉಪ ಸಮುದಾಯಗಳ ಸಮಾಜೋ, ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಗಳ ಮುಕ್ತ ಅವ ಲೋಕನ ಕುರಿತು ಮಂಗಳವಾರ ಹಮ್ಮಿ ಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ನಮ್ಮ ಸಮಸ್ಯೆಗಳ ವಿರುದ್ಧ ನಾವೇ ಧ್ವನಿ ಎತ್ತದಿದ್ದರೆ ಯಾವ ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಬೇರೆಯವರ ಮೇಲಿನ ಅವಲಂಬನೆಯಿಂದ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಇದು ಸಂಘಟನೆಯ ವೈಫಲ್ಯವಲ್ಲ, ಸಮ ನ್ವಯತೆಯ ಕೊರತೆ. ದಲಿತರ ಹೆಸರಲ್ಲಿ ಇರುವಷ್ಟು ಸಂಘಟನೆಗಳು ಬೇರೆ ಯಾವ ಜಾತಿಯಲ್ಲೂ ಇಲ್ಲ. ಅಂತಹ ಬಿಡಿ ಸಂಘಟನೆಗಳಿಂದ ಸಮಾಜಕ್ಕೆ ಯಾವ ಲಾಭವೂ ಆಗುವುದಿಲ್ಲ’ ಎಂದು ಕಿವಿಮಾತು ಹೇಳಿದರು.

ADVERTISEMENT

ಎಲ್ಲಿಯವರೆಗೆ ಕಾನೂನಿಗೆ ಗೌರವ ತೋರುವ ಸಮಾಜ ನಿರ್ಮಾಣವಾಗುವುದಿಲ್ಲವೋ, ಅಲ್ಲಿಯವರೆಗೂ ಕಾನೂನು ಪರಿಣಾಮಕಾರಿ ಆಗುವುದಿಲ್ಲ. ಆತ್ಮಸಾಕ್ಷಿ ಒಂದೇ ತಕ್ಷಣದ ಪರಿಹಾರವಾಗಿ ತೋರುತ್ತದೆ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.