ADVERTISEMENT

ಸುಭಾಷ್ ಮೋದಿ ನೇತೃತ್ವದಲ್ಲೇ ಅಸ್ಪತ್ರೆ ಮುನ್ನೆಡೆಯಲಿ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 3:00 IST
Last Updated 13 ಜುಲೈ 2022, 3:00 IST

ಬೆಂಗಳೂರು: ‘ಡಾ.ಎಂ.ಸಿ. ಮೋದಿ ಆಸ್ಪತ್ರೆಯು ಅವರು ಸಹೋದರನ ಪುತ್ರ ಡಾ.ಸುಭಾಷ್ ಮೋದಿ ನೇತೃತ್ವದಲ್ಲೇ ಆಸ್ಪತ್ರೆ ಮುನ್ನೆಡೆಯಲಿ’ ಎಂದು ಕಾಶಿ ಮಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಎಂ.ಸಿ.ಮೋದಿ ಅವರ ದಾರಿಯಲ್ಲಿ ಡಾ.ಸುಭಾಷ್ ನಡೆಯುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವ ಅಗತ್ಯವಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿರಕ್ಯಾಡದ ಗುರು ಗಂಗಾಧರೇಶ್ವರ ಸಂಸ್ಥಾನ ಹಿರೇಮಠದ ಮುರಘೇಂದ್ರ ಶಿವಾಚಾರ್ಯಸ್ವಾಮಿ ಮಾತನಾಡಿ, ‘ಮೋದಿ ಆಸ್ಪತ್ರೆಯ ವಿಚಾರದಲ್ಲಿ ಎದ್ದಿರುವ ಗೊಂದಲ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಹಿಂದೆಯೇ ಮನವಿ ಮಾಡಿದ್ದೆವು. ಗೊಂದಲ ನಿವಾರಣೆ ಬಗ್ಗೆ ಭರವಸೆ ನೀಡಿದ್ದರು. ಅಗತ್ಯ ಬಿದ್ದರೆ ಲಿಂಗಾಯತ ಮಠಾಧೀಶರು ಮತ್ತೊಮ್ಮೆ ಅವರನ್ನು ಭೇಟಿ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

ಡಾ.ಸುಭಾಷ್ ಮೋದಿ ಮಾತನಾಡಿ, ’ಆಸ್ಪತ್ರೆ ಸಿಬ್ಬಂದಿ ಕಿಶೋರ್, ನಂದಿನಿ ಸೇರಿ ನಾಲ್ವರು ತಾವೇ ಆಡಳಿತಾಧಿಕಾರಿ ಎಂದು ವರ್ತಿಸುತ್ತಿದ್ದಾರೆ. ಪ್ಲಂಬರ್ ಕೆಲಸಕ್ಕೆ ಸೇರಿಕೊಂಡ ಕಿಶೋರ್ ಆಡಳಿತಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಮಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.