ADVERTISEMENT

ನಿಮ್ಹಾನ್ಸ್‌ಗೆ ವೈದ್ಯಕೀಯ ಉಪಕರಣ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 4:18 IST
Last Updated 7 ಜುಲೈ 2021, 4:18 IST
ರೋಟರಿ ಕ್ಲಬ್ ನೈರುತ್ಯ ವಿಭಾಗದ ಅಧ್ಯಕ್ಷ ಅಮರಚಂದ್ ರಾಂಧರ್ ಅವರು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರಿಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದರು.
ರೋಟರಿ ಕ್ಲಬ್ ನೈರುತ್ಯ ವಿಭಾಗದ ಅಧ್ಯಕ್ಷ ಅಮರಚಂದ್ ರಾಂಧರ್ ಅವರು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರಿಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದರು.   

ಬೆಂಗಳೂರು: ‘ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್‌ ಪರಿಹಾರ ಟ್ರಸ್ಟ್’ ಹಾಗೂ ಸಿನೊಪ್ಸಿಸ್ ಇಂಡಿಯಾ ಪ್ರೈ.ಲಿ. ನೀಡಿದ ಆರ್ಥಿಕ ಪರಿಹಾರವನ್ನು ಬಳಸಿಕೊಂಡು, ರೋಟರಿ ಕ್ಲಬ್ ನೈರುತ್ಯ ವಿಭಾಗ ಹಾಗೂ ಪ್ರಾಜೆಕ್ಟ್ ಸ್ಟೆಪ್ ಒನ್ ₹ 8.5 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನಿಮ್ಹಾನ್ಸ್‌ಗೆ ಹಸ್ತಾಂತರಿಸಿವೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ತೀವ್ರ ನಿಗಾ ಘಟಕಕ್ಕೆ ಮೂಲಸೌಕರ್ಯ ಒದಗಿಸುವ ಕಾರ್ಯವನ್ನು ರೋಟರಿ ಕ್ಲಬ್ ನೈರುತ್ಯ ವಿಭಾಗ ಹಾಗೂ ಪ್ರಾಜೆಕ್ಟ್ ಸ್ಟೆಪ್ ಒನ್ ಮುಂದುವರೆಸಿವೆ. ಮೂಲಸೌಕರ್ಯ ವೃದ್ಧಿಗೆ ಈವರೆಗೆ ₹ 50 ಲಕ್ಷ ಮೌಲ್ಯದ ವಿವಿಧ ವೈದ್ಯಕೀಯ ಉಪಕರಣಗಳನ್ನು ದಾನ ನೀಡಿವೆ.

‌ರೋಟರಿ ಕ್ಲಬ್ ನೈರುತ್ಯ ವಿಭಾಗದ ಅಧ್ಯಕ್ಷ ಅಮರಚಂದ್ ರಾಂಧರ್ ಅವರು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರಿಗೆ 5ಬೈಪಾಸ್‌ ಯಂತ್ರಗಳು, 2 ಎಚ್‌ಎನ್‌ಎಫ್‌ಸಿ ಯಂತ್ರಗಳನ್ನು ಹಸ್ತಾಂತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.