ADVERTISEMENT

ಬೆಂಗಳೂರು: ತಡರಾತ್ರಿ ತನಕ ಮೆಟ್ರೊ ಫೀಡರ್ ಬಸ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 4:35 IST
Last Updated 18 ನವೆಂಬರ್ 2021, 4:35 IST
ಬಿಎಂಟಿಸಿ
ಬಿಎಂಟಿಸಿ   

ಬೆಂಗಳೂರು: ಪ್ರಮುಖ ಮೆಟ್ರೊ ರೈಲು ನಿಲ್ದಾಣಗಳಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಫೀಡರ್ ಬಸ್‌ಗಳ ಸೇವೆಯನ್ನು ಬಿಎಂಟಿಸಿ ತಡರಾತ್ರಿ ತನಕ ವಿಸ್ತರಣೆ ಮಾಡಿದೆ.

ಎಸ್‌.ವಿ.(ಸ್ವಾಮಿ ವಿವೇಕಾನಂದ) ಮೆಟ್ರೊ ನಿಲ್ದಾಣದಿಂದ ಧೂಪನಹಳ್ಳಿ ಮತ್ತು ಕೋರಮಂಗಲ ಮಾರ್ಗದಲ್ಲಿ ಸಿಲ್ಕ್ ಬೋರ್ಡ್, ಎಸ್‌.ವಿ. ಮೆಟ್ರೊ ನಿಲ್ದಾಣದಿಂದ ಕೆ.ಆರ್‌.ಪುರ ಮತ್ತು ಹೂಡಿ ರೈಲು ನಿಲ್ದಾಣ ಮಾರ್ಗದಲ್ಲಿ ವೈಟ್‌ಫೀಲ್ಡ್ ಟಿಟಿಎಂಸಿ, ವಿಜಯನಗರ ಮೆಟ್ರೊ ನಿಲ್ದಾಣದಿಂದ ಚಂದ್ರ ಲೇಔಟ್‌ ಮತ್ತು ನಾಗರಬಾವಿ ಮಾರ್ಗದಲ್ಲಿ ಅಂಬೇಡ್ಕರ್ ಕಾಲೇಜು, ರಾಜರಾಜೇಶ್ವರಿನಗರ ಮೆಟ್ರೊ ನಿಲ್ದಾಣದಿಂದ ಬೆಂಗಳೂರು ವಿಶ್ವವಿದ್ಯಾಲಯದ ಮಾರ್ಗದಲ್ಲಿ ಬಿಇಎಂಎಲ್ 5ನೇ ಹಂತಕ್ಕೆ ಫೀಡರ್‌ ಬಸ್‌ಗಳ ಅವಧಿ ವಿಸ್ತರಣೆ ಮಾಡಿದೆ.

ಜ್ಞಾನಭಾರತಿ ಮೆಟ್ರೊ ನಿಲ್ದಾಣದಿಂದ ಉಲ್ಲಾಳು ಉಪನಗರ, ಜಾಲಹಳ್ಳಿ ಮೆಟ್ರೊ ನಿಲ್ದಾಣದಿಂದ ಟಿವಿಎಸ್ ಕ್ರಾಸ್ ಮಾರ್ಗದಲ್ಲಿ ಪೀಣ್ಯ 2ನೇ ಹಂತ, ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ದಾಸರಹಳ್ಳಿ ಚಿಕ್ಕಬಾಣಾವರ, ಜಯನಗರ ಮೆಟ್ರೊ ನಿಲ್ದಾಣದಿಂದ ಜಯನಗರ 5ನೇ ಬ್ಲಾಕ್, ಪುಟ್ಟೇನಹಳ್ಳಿ, ಕೊತ್ತನೂರು ದಿಣ್ಣೆ ಮಾರ್ಗದಲ್ಲಿ ಜಂಬುಸವಾರಿ ದಿಣ್ಣೆ, ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದಿಂದ ಅಗರ ಗೇಟ್ ಮತ್ತು ಉದಯಪಾಳ್ಯ ಮಾರ್ಗದಲ್ಲಿ ಕಗ್ಗಲಿಪುರಕ್ಕೆ ಫೀಡರ್‌ ಬಸ್‌ಗಳ ಕಾರ್ಯಾಚರಣೆಯನ್ನು ತಡರಾತ್ರಿ ತನಕ ವಿಸ್ತರಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.