ಮೆಟ್ರೊ
ಬೆಂಗಳೂರು: ಬಿಡದಿ ಹಾಫ್ ಮ್ಯಾರಾಥಾನ್ ಭಾನುವಾರ ನಡೆಯಲಿರುವುದರಿಂದ ಅಂದು ಬೆಳಿಗ್ಗೆ ಎರಡು–ಮೂರು ತಾಸು ಬೇಗ ಮೆಟ್ರೊ ಸಂಚಾರ ಆರಂಭವಾಗಲಿದೆ.
ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ‘ನಮ್ಮ ಮೆಟ್ರೊ’ ಸಂಚಾರ ಆರಂಭವಾಗುತ್ತಿತ್ತು.
ಮ್ಯಾರಾಥಾನ್‌ನಲ್ಲಿ ಭಾಗವಹಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಭಾನುವಾರ ಬೆಳಿಗ್ಗೆ 5ಕ್ಕೆ ನಾಲ್ಕು ಟರ್ಮಿನಲ್‌ಗಳಿಂದ ಸಂಚಾರ ಆರಂಭವಾಗಲಿದೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಚಲ್ಲಘಟ್ಟ ಕಡೆಗೆ ಬೆಳಿಗ್ಗೆ 4ಕ್ಕೆ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.