ADVERTISEMENT

ಬ್ಯಾಟರಾಯನಪುರ: ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:43 IST
Last Updated 28 ಜೂನ್ 2025, 16:43 IST
<div class="paragraphs"><p>ಕೃಷ್ಣಬೈರೇಗೌಡ ಅವರು ಕಟ್ಟಿಗೇನಹಳ್ಳಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ</p></div>

ಕೃಷ್ಣಬೈರೇಗೌಡ ಅವರು ಕಟ್ಟಿಗೇನಹಳ್ಳಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ

   

ಯಲಹಂಕ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಬ್ಯಾಟರಾಯನಪುರ ಕ್ಷೇತ್ರದ ಕಟ್ಟಿಗೇನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಹಾಗೂ ನೂತನವಾಗಿ ಆರಂಭಗೊಂಡಿರುವ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಾಲೇಜು ಕಟ್ಟಡದ ಮುಂಭಾಗದ ಆಟದ ಮೈದಾನದ ಎರಡೂ ಕಡೆಗಳಲ್ಲಿ ಶಿಕ್ಷಕರ ವಾಹನ ನಿಲುಗಡೆಗೆ ನಿರ್ಮಿಸುತ್ತಿರುವ ಪಾರ್ಕಿಂಗ್‌ ತಾಣ ಸ್ಥಳಾಂತರಿಸಲು ಸೂಚಿಸಿದರು. ಮೈದಾನದಲ್ಲಿ ಮಳೆನೀರು ನಿಲ್ಲದಂತೆ ಭೂಮಿ ಸಮತಟ್ಟುಮಾಡಿ, ಚರಂಡಿಗೆ ನೀರು ಹರಿದುಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯದ ನೆಲಕ್ಕೆ ಅಳವಡಿಸಿರುವ ಟೈಲ್ಸ್‌ಗಳನ್ನು ಬದಲಾಯಿಸಿ, ಬಣ್ಣದ ಹೊಂದಾಣಿಕೆಯಾಗುವಂತೆ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಪಿಯುಸಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಸಚಿವರು, ‘ಒಳ್ಳೆಯ ಕಟ್ಟಡ ಮತ್ತು ಆಟದ ಮೈದಾನದ ಜೊತೆಗೆ ಮೂಲಸೌಕರ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಿಬಿಎಂಪಿ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಹರಿಪ್ರಸಾದ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಚೇತನ್‌, ಬಿಇಒ ರಾಮಮೂರ್ತಿ, ಕಾಂಗ್ರೆಸ್‌ ಮುಖಂಡರಾದ ದಾನೇಗೌಡ, ಎಚ್‌.ಎ. ಶಿವಕುಮಾರ್‌, ಗೋಪಾಲ್‌ ರೆಡ್ಡಿ, ಟಿ.ವೆಂಕಟರಾಮರೆಡ್ಡಿ, ಎಂ.ಶ್ರೀನಿವಾಸ್‌, ಎಂ.ಮೋಹನ್‌ರಾಜ್‌, ಈರಪ್ಪ, ವೆಂಕಟೇಶಯ್ಯ, ಕೃಷ್ಣಪ್ಪ, ಗುತ್ತಿಗೆದಾರರಾದ ಎಂ.ವಿ.ಮುರಳೀಧರ್‌, ಡಿ.ಕೆ.ನಾಗರಾಜ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.