ADVERTISEMENT

ಆಧಾರ್‌ ದುರುಪಯೋಗ: ರಾಜ್ಯದಲ್ಲಿ 2.95 ಲಕ್ಷ ದೂರು

ಸೈಬರ್‌ ವಂಚಕರಿಂದ ಒಂದೇ ನಂಬರ್‌ನಲ್ಲಿ ಸಿಮ್‌ ಖರೀದಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 0:30 IST
Last Updated 19 ಮೇ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌ ಮ್ಯಾನೇಜ್‌ಮೆಂಟ್‌ ಮತ್ತು ಕನ್ಸೂಮರ್‌ ಪ್ರೊಟೆಕ್ಷನ್‌ಗೆ (ಟಿಎಎಫ್‌ಸಿಒಪಿ) ಕರ್ನಾಟಕದಿಂದಲೇ 2.95 ಲಕ್ಷ ದೂರುಗಳು ಬಂದಿವೆ.

ಜನರು ಬೇರೆ ಬೇರೆ ಕೆಲಸಕ್ಕೆ ಆಧಾರ್‌ ಕಾರ್ಡ್ ಸಲ್ಲಿಕೆ ಮಾಡುತ್ತಾರೆ. ಅದೇ ದಾಖಲೆಯನ್ನು ಸೈಬರ್‌ ವಂಚಕರು ಹಾಗೂ ಕಳ್ಳರು ಪಡೆದು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

‘ದಾಖಲೆ ದುರುಪಯೋಗ ಮಾಡಿಕೊಂಡಿರುವ ಸಂಬಂಧ ರಾಜ್ಯದಲ್ಲಿ 2,95,040 ದೂರುಗಳು ಬಂದಿವೆ. ಅದರಲ್ಲಿ 2,82,455 ದೂರುಗಳನ್ನು ಪರಿಹರಿಸಲಾಗಿದೆ. 12,585 ದೂರುಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ರಾಜ್ಯದಲ್ಲಿ 2,28,613 ಮೊಬೈಲ್‌ ಸಂಖ್ಯೆಯನ್ನು ಬ್ಲಾಕ್‌ ಮಾಡಲಾಗಿದೆ. ಈ ಪೈಕಿ 1,07,407 ಮೊಬೈಲ್‌ಗಳು ಇರುವ ಸ್ಥಳವನ್ನು ನೆಟ್‌ವರ್ಕ್ ಮೂಲಕ ಪತ್ತೆ ಮಾಡಲಾಗಿದೆ. ಈ ಪೈಕಿ 35,945 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.

ದೇಶದಾದ್ಯಂತ ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ 69,66,697 ದೂರುಗಳು ಬಂದಿವೆ. ಆ ಪೈಕಿ 60,29,631 ದೂರುಗಳಿಗೆ ಪರಿಹಾರ ಸಿಕ್ಕಿದ್ದು, 9,37,066 ದೂರುಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಟಿಎಎಫ್‌ಸಿಒಪಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.