ADVERTISEMENT

ಶೌಚಾಲಯ ಬಳಕೆ ಶುಲ್ಕ ನಿಗದಿ ರದ್ದು ಮಾಡಿದ ಬಿಎಂಆರ್‌ಸಿಎಲ್‌

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:33 IST
Last Updated 28 ಮೇ 2025, 16:33 IST
<div class="paragraphs"><p>&nbsp; ಬಿಎಂಆರ್‌ಸಿಎಲ್‌</p></div>

  ಬಿಎಂಆರ್‌ಸಿಎಲ್‌

   

ಬೆಂಗಳೂರು: ನಮ್ಮ ಮೆಟ್ರೊದ 12 ನಿಲ್ದಾಣಗಳಲ್ಲಿ ಶೌಚಾಲಯ ಬಳಕೆ ಶುಲ್ಕ ವಿಧಿಸುವ ನಿರ್ಧಾರವನ್ನು ಪ್ರಯಾಣಿಕರ ವಿರೋಧದಿಂದಾಗಿ ಬಿಎಂಆರ್‌ಸಿಎಲ್‌ ವಾ‍ಪಸ್‌ ಪಡೆದಿದೆ.

ಹಸಿರು ಮಾರ್ಗದಲ್ಲಿ ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ್ ನಗರ, ಯಲಚೇನಹಳ್ಳಿ, ನೇರಳೆ ಮಾರ್ಗದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ - ಸೆಂಟ್ರಲ್ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣ - ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣಗಳಲ್ಲಿ ಬಳಕೆದಾರರ ಶುಲ್ಕ ಸಂಗ್ರಹ ಮಾಡಲಾಗುತ್ತಿತ್ತು. 

ADVERTISEMENT

‘ಸುಲಭ್‌ ಶೌಚಾಲಯ ಇಂಟರ್‌ನ್ಯಾಷನಲ್‌’ ಸಂಸ್ಥೆಗೆ ಶೌಚಾಲಯ ನಿರ್ವಹಣೆಯನ್ನು ವಹಿಸಲಾಗಿತ್ತು. ಮೂತ್ರ ವಿಸರ್ಜನೆಗೆ ₹ 2, ಶೌಚಾಲಯ ಬಳಕೆಗೆ ₹5 ನಿಗದಿಪಡಿಸಲಾಗಿತ್ತು. ಇದನ್ನು ವಿರೋಧಿಸಿ ನಾಗರಿಕರು ವಿಧಾನಸೌಧ ಮೆಟ್ರೊ ನಿಲ್ದಾಣದ ಹೊರಗೆ ಪ್ರತಿಭಟನೆ ನಡೆಸಿದ್ದರು.

‘ಮೆಟ್ರೊ ಸ್ವೈಪ್‌ ಗೇಟ್‌ಗಿಂತ ಹೊರಗೆ ಇರುವ ಶೌಚಾಲಯಗಳನ್ನು ಬಳಕೆ ಮಾಡುವವರಿಗೆ ಕನಿಷ್ಠ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಈಗ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.