ಬೆಂಗಳೂರು: ‘ನಮ್ಮ ಮೆಟ್ರೊ’ ಆರಂಭವಾಗಿ ಇಂದಿಗೆ 14 ವರ್ಷ ಪೂರೈಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
‘ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆಯವರೆಗಿನ ಮೊದಲ 6.7 ಕಿ.ಮೀ ಪಯಣದಿಂದ, ಇಂದಿನ 96 ಕಿ.ಮೀಗೂ ಅಧಿಕ ಬೃಹತ್ ಜಾಲದವರೆಗೆ... ನಮ್ಮ ಮೆಟ್ರೊದ 14 ವರ್ಷಗಳ ಕ್ರಾಂತಿಕಾರಿ ಯಾನವಿದು’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
‘2011ರ ಅಕ್ಟೋಬರ್ 20 ಆರಂಭವಾದ ನಮ್ಮ ಮೆಟ್ರೊ, ಇಂದು ದಿನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರ ಬದುಕನ್ನು ಸುಲಭಗೊಳಿಸಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿದೆ. ಬೆಂಗಳೂರಿನ ಅಭಿವೃದ್ಧಿಯ 'ಗೇಮ್ ಚೇಂಜರ್' ಆಗಿದೆ’ ಎಂದು ಹೇಳಿದ್ದಾರೆ.
‘ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ’ (ಬಿಎಂಆರ್‌ಸಿಎಲ್) ಕೂಡ ಪೋಸ್ಟ್ ಹಂಚಿಕೊಂಡಿದ್ದು, ಎಲ್ಲಾ ಮೆಟ್ರೊ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದೆ.
ನಮ್ಮ ಮೆಟ್ರೊ ಇತಿಹಾಸ:
2003ರಲ್ಲಿ ವಿಸ್ಕೃತ ಯೋಜನಾ ವರದಿ(ಡಿಪಿಆರ್) ಸಿದ್ದಪರಿಸಲಾಗಿತ್ತು. 2006ರಲ್ಲಿ ಕೇಂದ್ರದ ಅನುಮೋದನೆ ದೊರೆತಿದ್ದು, 2007ರಲ್ಲಿ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆಯವರೆಗೆ ಮೊದಲ ಹಂತದ ಕಾಮಗಾರಿ ಪ್ರಾರಂಭವಾಯಿತು. 2011 ಅಕ್ಟೋಬರ್ 20ರಂದು ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.