ADVERTISEMENT

ಮೆಟ್ರೋ ಹಂತ–2ಕ್ಕೆ ₹40,424 ಕೋಟಿ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:04 IST
Last Updated 22 ಮೇ 2025, 16:04 IST
<div class="paragraphs"><p>&nbsp;ನಮ್ಮ ಮೆಟ್ರೊ</p></div>

 ನಮ್ಮ ಮೆಟ್ರೊ

   

ಬೆಂಗಳೂರು: ಮೆಟ್ರೊ ಹಂತ–2ರ ಯೋಜನೆಯ ಅಂದಾಜು ವೆಚ್ಚವನ್ನು ₹40424 ಕೋಟಿಗೆ ಪರಿಷ್ಕರಿಸಿದ್ದು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕೇಂದ್ರದಿಂದ ಅನುಮೋದಿತ ವೆಚ್ಚ ₹26405 ಕೋಟಿ ಆಗಿದ್ದು ಈಗ ₹14019 ಕೋಟಿಯಷ್ಟು ಹೆಚ್ಚಾಗಿದೆ. ಭೂಸ್ವಾದೀನ ವೆಚ್ಚ ಮತ್ತು ವಿಸ್ತೀರ್ಣದಲ್ಲಿ ಏರಿಕೆ ಭೂಮಿಯ ಮಾರ್ಗಸೂಚಿ ದರದಲ್ಲಿ ಏರಿಕೆ ಸಿವಿಲ್ ಕಾಮಗಾರಿಗಳ ವೆಚ್ಚವೂ ಏರಿಕೆ ಆಗಿರುವುದರಿಂದ ಅಂದಾಜು ವೆಚ್ಚ ಪರಿಷ್ಕರಿಸಲಾಗಿದೆ ಎಂದರು.

ADVERTISEMENT

ಬೆಂಗಳೂರಿನಲ್ಲಿ ಸುರಂಗ ರಸ್ತೆಯನ್ನು ಹೈಬ್ರಿಡ್‌ ಮಾದರಿಯಲ್ಲಿ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಮುಖ್ಯಮಂತ್ರಿ ಜತೆ ತಾಂತ್ರಿಕ ಅಂಶ ಚರ್ಚಿಸಿ ನಿರ್ಧರಿಸುತ್ತೇವೆ. ಇದಕ್ಕೆ ಜಾಗತಿಕ ಟೆಂಡರ್‌ ಕರೆಯಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.