ಬೆಂಗಳೂರು: ನಮ್ಮ ಮೆಟ್ರೊ ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ತನಕ ಸುರಂಗ ಕೊರೆದ ವಿಂದ್ಯಾ ಟಿಬಿಎಂ(ಟನಲ್ ಬೋರಿಂಗ್ ಮಷಿನ್ ) ಗುರುವಾರ ಹೊರ ಬಂದಿದೆ.
2022ರ ಫೆಬ್ರುವರಿ 15 ರಂದು ಕಾಮಗಾರಿ ಆರಂಭಿಸಲಾಗಿತ್ತು. ಆರು ತಿಂಗಳಲ್ಲಿ 900 ಮೀಟರ್ ಸುರಂಗ ಕೊರೆಯುವಲ್ಲಿ 'ವಿಂದ್ಯಾ' ಯಶಸ್ವಿಯಾಗಿದೆ. ಒಟ್ಟಾರೆ ವಿಂದ್ಯಾ ಟಿಬಿಎಂ 1,755 ಮೀಟರ್ ಸುರಂಗ ಕೊರೆದಿದೆ.
ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್ ನಡುವೆ ಜೋಡಿ ಸುರಂಗ ಮಾರ್ಗ ಪೂರ್ಣಗೊಂಡಂತಾಗಿದೆ. ಜೂನ್ 30ರಲ್ಲಿ ಒಂದು ಮಾರ್ಗವನ್ನು 'ಊರ್ಜಾ' ಟಿಬಿಎಂ ಪೂರ್ಣಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.