ಬೆಂಗಳೂರು: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಚೈತನ್ಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, 13 ಮಂದಿ ರ್‍ಯಾಂಕ್ ಪಡೆದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿ ವಿ. ಕಲ್ಯಾಣ್ 720 ಅಂಕ ಪಡೆಯುವುದರೊಂದಿಗೆ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅನಿಮೇಶ್ ಸಿಂಗ್ ರಾಥೋಡ್ ಅವರು ತೃತೀಯ ರ್‍ಯಾಂಕ್ ಗಳಿಸಿದ್ದಾರೆ. ನೇಹಾಲ್ ಎಚ್. ಪ್ರಸನ್ನ 715 ಅಂಕ, ಅನನ್ಯ ಅಶೋಕ್ ರಾವ್ 710 ಅಂಕ, ಭರಣಿಧರನ್ ಜಿ. 710 ಅಂಕ, ಮಾನ್ಯ ಜೈನ್ 705 ಅಂಕ, ಮೊಹ್ಸಿನ್ ಶೇಕ್ 705 ಅಂಕ ಪಡೆದಿದ್ದಾರೆ.
ಶೇಕ್ ಫಜಲ್ ಅಹಮದ್, ನಿತೀಶ್ ಎನ್.ವಿ., ಬೇರು ಶಶಾಂಕ್, ಹಾಸಿನಿ ತೇಜೋಮೂರ್ತುಲ ಹಾಗೂ ಕುವಲ್ ಕೆ.ಆರ್. ತಲಾ 700 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಸುಷ್ಮಾ ಬೋಪಣ್ಣ ಅಭಿನಂದಿಸಿದ್ದಾರೆ ಎಂದು ಬೆಂಗಳೂರಿನ ಶ್ರೀ ಚೈತನ್ಯ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್‌ನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ವಿ. ಸತೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.