ADVERTISEMENT

ವೀಲೋಗ್ರಾಫಿ: ವಿಜಯ್‌ಗೆ ‘ರುಕ್ನಾ ನಹಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 19:38 IST
Last Updated 13 ಮಾರ್ಚ್ 2019, 19:38 IST
ಪ್ರಶಸ್ತಿ ಸ್ವೀಕರಿಸುತ್ತಿರುವ ಎನ್‌.ಎಂ.ವಿಜಯ್‌
ಪ್ರಶಸ್ತಿ ಸ್ವೀಕರಿಸುತ್ತಿರುವ ಎನ್‌.ಎಂ.ವಿಜಯ್‌   

ನೆಲಮಂಗಲ: ಪಟ್ಟಣದ ಸುಭಾಷ್‌ನಗರ ನಿವಾಸಿ ಅಂಗವಿಕಲ ವೀಲೋಗ್ರಾಫರ್‌ ಎನ್‌.ಎಂ.ವಿಜಯ್‌ ಅವರು ವೀಲೋಗ್ರಫಿ (ವಿಕಲಾಂಗರ ಛಾಯಾಗ್ರಹಣ) ಸ್ಪರ್ಧೆಯಲ್ಲಿ ‘ರುಕ್ನಾ ನಹಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಏಷಿಯನ್‌ ಫಿಸಿಯೋಥೆರಪಿ ಆ್ಯಂಡ್‌ ರಿಸರ್ಚ್‌ ಸೆಂಟರ್‌ ಅವರು ಅಂಗವಿಕಲ ಛಾಯಾಗ್ರಾಹಕರಿಗಾಗಿ ನೀಡುವ ಪ್ರಶಸ್ತಿ ಇದಾಗಿದೆ. ಈಚೆಗೆ ಗುಜರಾತ್‌ನ ಸೂರತ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಎನ್‌.ಎಂ.ವಿಜಯ್‌ ಅವರು ಅಂಗವಿಕಲ ಕ್ರೀಡಾಪಟುಗಳಿಗಾಗಿ ದಿವ್ಯಾಂಗ್‌ ಮೈತ್ರಿ ಸ್ಪೋರ್ಟ್ಸ್‌ ಅಕಾಡೆಮಿ ಸಂಸ್ಥಾಪಕರು. ದಿವ್ಯಾಂಗ್‌ ಸಂಸ್ಥೆ ವತಿಯಿಂದ ಗಾಲಿಕುರ್ಚಿ ಕ್ರಿಕೆಟ್‌, ಬ್ಯಾಸ್ಕೆಟ್‌ ಬಾಲ್‌ ಇತರ ಕ್ರೀಡೆಗಳ ತರಬೇತಿ, ಪಂದ್ಯ ಹಮ್ಮಿಕೊಳ್ಳಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.