ADVERTISEMENT

ನೆಲಮಂಗಲ: ಮೂರು ಕರುವಿಗೆ ಜನ್ಮ ನೀಡಿದ ಹಸು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 22:56 IST
Last Updated 13 ಸೆಪ್ಟೆಂಬರ್ 2025, 22:56 IST
ಮೂರು ಕರುಗಳೊಂದಿಗೆ ಹಸು
ಮೂರು ಕರುಗಳೊಂದಿಗೆ ಹಸು   

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಕಂಬಾಳು ಮಠದಲ್ಲಿರುವ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದೆ.

ಶನಿವಾರ ಬೆಳಿಗ್ಗೆ ಹಸು ಕೆಲವೇ ನಿಮಿಷಗಳಲ್ಲಿ ಮೂರು ಕರುಗಳನ್ನು ಹಾಕಿದೆ. ಈ ಹಸು ಮಠಕ್ಕೆ ಪ್ರೀತಿಪಾತ್ರವಾಗಿದ್ದು ಲಕ್ಷ್ಮೀ ಹೆಸರಿನಲ್ಲಿ ಕರೆಯುತ್ತಾರೆ. ಮಠಾಧೀಶರಾದ ಚನ್ನವೀರ ಶಿವಾಚಾರ್ಯಸ್ವಾಮೀಜಿಗಳು ಹಾಗೂ ಸಿಬ್ಬಂದಿ ಹಸು ಲಕ್ಷ್ಮಿ ಮತ್ತು ಮೂರು ಕರುಗಳ ಆರೈಕೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT