ADVERTISEMENT

‘ನೇತಾಜಿ ಉದ್ಯಾನಕ್ಕೆ ಮೂಲಸೌಲಭ್ಯ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 17:09 IST
Last Updated 23 ಜನವರಿ 2021, 17:09 IST
ನೆಲಮಂಗಲದ ನೇತಾಜಿ ಉದ್ಯಾನದಲ್ಲಿ ಕನ್ನಡದ ಕಣ್ವ ಬಿಎಂಶ್ರೀ ಮತ್ತು ಸುಭಾಷಚಂದ್ರ ಬೋಸರ ಜನ್ಮದಿನ ಆಚರಿಸಲಾಯಿತು
ನೆಲಮಂಗಲದ ನೇತಾಜಿ ಉದ್ಯಾನದಲ್ಲಿ ಕನ್ನಡದ ಕಣ್ವ ಬಿಎಂಶ್ರೀ ಮತ್ತು ಸುಭಾಷಚಂದ್ರ ಬೋಸರ ಜನ್ಮದಿನ ಆಚರಿಸಲಾಯಿತು   

ನೆಲಮಂಗಲ: ‘ನೇತಾಜಿ ಸುಭಾಷ್‌ಚಂದ್ರ ಬೋಸ್ ಸ್ಮರಣೆಯು ಸ್ಮಾರಕ, ರಸ್ತೆ ಮತ್ತು ವೃತ್ತಕ್ಕೆ ಹೆಸರಿಡುವುದಕ್ಕೆ ಸೀಮಿತವಾಗದೆ ಶಾಲಾ ಕಾಲೇಜು ಹಾಗೂ ಗಲ್ಲಿ–ಗಲ್ಲಿಗಳಲ್ಲಿ ಸುಭಾಷರ ದೇಶ ಭಕ್ತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು’ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಪುಷ್ಪಾ ಹೇಳಿದರು.

ಪಟ್ಟಣದ ನೇತಾಜಿ ಉದ್ಯಾನದಲ್ಲಿ ಕನ್ನಡ ಸಾಂಸ್ಕೃತಿಕ ಕಲಾರಂಗ ಆಯೋಜಿಸಿದ್ದ ಸುಭಾಷಚಂದ್ರರ 125ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕಲಾರಂಗದ ಅಧ್ಯಕ್ಷ ಡಿ. ಸಿದ್ದರಾಜು, ‘ನೇತಾಜಿ ಉದ್ಯಾನವನ್ನು ಆಧುನೀಕರಣಗೊಳಿಸಿ, ಮೂಲಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದರು.

ADVERTISEMENT

ಡಾ.ಮುರಳೀಧರ್‌, ಎಚ್‌.ಜಿ.ರಾಜು, ಡಾ.ಲಕ್ಷೀನಾರಾಯಣ್‌ಶೆಟ್ಟಿ ಮಾತನಾಡಿದರು. ಕವಿಗಳಾದ ಸಿರಾಜ್‌ ಅಹಮದ್‌, ಕಂಡಕ್ಟರ್‌ ಗಂಗರಾಜು ನೇತಾಜಿ ಕುರಿತು ಕವನ ವಾಚಿಸಿದರು.

ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.