ADVERTISEMENT

‘₹2,000 ನೋಟು ರದ್ದತಿ ಒಳಿತು’

ಗರಿಷ್ಠ ಮುಖಬೆಲೆ ನೋಟುಗಳ ರದ್ದತಿಗೆ ಇಂದು 3 ವರ್ಷ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:11 IST
Last Updated 7 ನವೆಂಬರ್ 2019, 20:11 IST
..
..   

ನವದೆಹಲಿ: ‘₹ 2,000 ಮುಖಬೆಲೆಯ ಬಹುತೇಕ ನೋಟುಗಳು ಚಲಾವಣೆಯಲ್ಲಿಲ್ಲ. ಸಂಗ್ರಹಕ್ಕೆ ಸೀಮಿತವಾಗಿರುವ ಅವುಗಳನ್ನು ರದ್ದುಗೊಳಿಸುವುದೇ ಒಳಿತು’ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.

ದೇಶದಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿ ನೋಟುಗಳ ಮೌಲ್ಯದ ಲೆಕ್ಕದಲ್ಲಿ ₹ 2,000 ಮುಖಬೆಲೆಯ ನೋಟುಗಳು ಒಂದು ಮೂರಾಂಶದಷ್ಟು ಇರುವ ಅಂದಾಜಿದೆ. ಯಾವುದೇ ಅಡೆತಡೆ ಇಲ್ಲದೇ ಇವುಗಳನ್ನು ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಇಡುವ ಮೂಲಕ ಸುಲಭವಾಗಿ ರದ್ದುಪಡಿಸಬಹುದು ಎಂದು ಅವರು ಹೇಳಿದ್ದಾರೆ.

₹1,000 ಹಾಗೂ ₹500 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿ ಶುಕ್ರವಾರಕ್ಕೆ (ನ.8) ಮೂರು ವರ್ಷಗಳು ಪೂರ್ಣಗೊಳ್ಳಲಿವೆ. ನೋಟು ರದ್ದತಿ ಬಳಿಕ ₹2,000 ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದಿದ್ದವು.

ADVERTISEMENT

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮಂಡನೆ ಬಳಿಕ ಗರ್ಗ್ ಅವರನ್ನು ಹಣಕಾಸು ಸಚಿವಾಲಯದಿಂದ ವರ್ಗಾಯಿಸಲಾಗಿತ್ತು. ಇದರಿಂದ ಬೇಸತ್ತ ಅವರು ಕಳೆದ ತಿಂಗಳು ಸ್ವಯಂ ನಿವೃತ್ತಿ ಪಡೆದಿದ್ದರು. ಕೇಂದ್ರ ಸರ್ಕಾರದ ಹಣಕಾಸು ನಿರ್ವಹಣೆಯನ್ನು ಅವರು ಹಲವು ಬಾರಿ ಕಟುವಾಗಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.