ADVERTISEMENT

ಮಾಸ್ಕ್ ಹಾಕದೆ ರೋಗಿಗಳಿಗೆ ಚಿಕಿತ್ಸೆ: ಡಾ.ರಾಜುಗೆ ನೋಟಿಸ್ ಜಾರಿ

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:08 IST
Last Updated 17 ಮೇ 2021, 19:08 IST
ಡಾ.‌ರಾಜು ಕೃಷ್ಣಮೂರ್ತಿ
ಡಾ.‌ರಾಜು ಕೃಷ್ಣಮೂರ್ತಿ   

ಬೆಂಗಳೂರು: ಮಾಸ್ಕ್ ಹಾಕದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಮೂಡಲಪಾಳ್ಯದ ಸಾಗರ್ ಕ್ಲಿನಿಕ್ ನ ಡಾ.‌ರಾಜು ಕೃಷ್ಣಮೂರ್ತಿಯವರಿಗೆ ಜಿಲ್ಲಾ ಆರೋಗ್ಯಾಧಿಕಾರಿ ನೋಟಿಸ್ ನೀಡಿದ್ದಾರೆ.

‘ಕ್ಲಿನಿಕ್ ನಲ್ಲಿ ಮಾಸ್ಕ್ ಹಾಕದೆ, ಸ್ಯಾನಿಟೈಸರ್ ಬಳಸದೆ ಮತ್ತು ಸೂಕ್ತ ಅಂತರ ಕಾಯ್ದುಕೊಳ್ಳದೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಗಳನ್ನು ಉಲ್ಲಂಘಿಸಿದ್ದೀರಿ. ಇದಕ್ಕೆ ಕಾರಣ ನೀಡಿ’ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ನೋಟಿಸ್ ನೀಡಿದ್ದಾರೆ.

‘ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದ್ದು, ಡಾ. ರಾಜು ಅವರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆಯನ್ನೂ(ಕೆಪಿಎಂಇ) ಉಲ್ಲಂಘಿಸಿದ್ದಾರೆ. ಅವರ ಕ್ಲಿನಿಕ್ ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡಲಾಗುವುದು. ಮಂಗಳವಾರ (ಮೇ 18) ಅವರ ಕ್ಲಿನಿಕ್ ಬಂದ್ ಮಾಡಿಸಲಾಗುವುದು’ ಎಂದು ಡಾ.ಶ್ರೀನಿವಾಸ್ ’ಪ್ರಜಾವಾಣಿ‘ಗೆ ತಿಳಿಸಿದರು.

‘ಮಾಸ್ಕ್ ಹಾಕದೆ ರೋಗಿಗಳಿಗೆ ಚಿಕಿತ್ಸೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿಸೋಮವಾರ ವರದಿ ಪ್ರಕಟವಾಗಿತ್ತು. ಡಾ.ರಾಜು ಅವರ ನಡೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದು ತಜ್ಞರು, ನಾಗರಿಕರು ಆತಂಕ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.