ADVERTISEMENT

ಮಹಿಳೆಗೆ ₹ 4.6 ಲಕ್ಷ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 20:47 IST
Last Updated 1 ಏಪ್ರಿಲ್ 2020, 20:47 IST

ಬೆಂಗಳೂರು: ವಧು– ವರಾನ್ವೇಷಣೆ ಜಾಲತಾಣದಲ್ಲಿ ಪರಿಚಿತನಾದ ಇಂಗ್ಲೆಂಡ್‌ನ ಅನಿವಾಸಿ ಭಾರತೀಯನೊಬ್ಬ ನಗರದ 36 ವರ್ಷದ ಮಹಿಳೆಗೆ ₹ 4.6 ಲಕ್ಷ ವಂಚಿಸಿರುವ ಕುರಿತು ಆರ್‌.ಟಿ. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ನವೆಂಬರ್‌ನಲ್ಲಿ ವೈವಾಹಿಕ ಜಾಲತಾಣದಲ್ಲಿ ಮಹಿಳೆಗೆ ಪರಿಚಿಯವಾದ ಆ್ಯಂಡಿ ಮೈಕಲ್‌ ಎಂಬಾತ, ’ತಾನು ಲಂಡನ್‌ ನಿವಾಸಿ
ಯಾಗಿದ್ದು, ವ್ಯಾಪಾರ ಮಾಡುತ್ತಿದ್ದೇನೆ. ತನ್ನ ವ್ಯಾಪಾರವನ್ನು ಭಾರತಕ್ಕೆ ಸ್ಥಳಾಂತರಿಸಲು ಉದ್ದೇಶಿಸಿದ್ದೇನೆ. ಆನಂತರ ನಿಮ್ಮನ್ನು ಮದುವೆ ಆಗುತ್ತೇನೆ‘ ಎಂದು ನಂಬಿಸಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಾರ್ಚ್‌ 28ರಂದು ಮಹಿಳೆಗೆ ಕರೆ ಮಾಡಿದ್ದ ಅನಿವಾಸಿ ಭಾರತೀಯ, ನಿಮಗಾಗಿ ಉಡುಗೊರೆ ತರುತ್ತಿದ್ದ ತನ್ನನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಹಿಡಿದುಕೊಂಡಿದ್ದಾರೆ.

ADVERTISEMENT

ಈ ಉಡುಗೊರೆ ಬಿಡಿಸಿಕೊಳ್ಳಲು ಹಣ ಬೇಕಿದೆ. ಹಣವನ್ನು ತನ್ನ ಬ್ಯಾಂಕ್‌ ಖಾತೆಗೆ ಜಮಾ ಮಾಡಿದರೆ ಕೂಡಲೇ ಹಿಂತಿರುಗಿಸುವುದಾಗಿ ನಂಬಿಸಿದ. ಈತನ ಮಾತನ್ನು ನಂಬಿದ ಮಹಿಳೆ ಆತನ ಮೂರು ಬ್ಯಾಂಕ್‌ ಖಾತೆಗಳಿಗೆ ₹ 4.6 ಲಕ್ಷ ಜಮಾ ಮಾಡಿದರು. ಇದಾದ ಬಳಿಕ ಆ್ಯಂಡಿ ಮೊಬೈಲ್‌ ಸ್ವಿಚ್ ಆಫ್‌ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.