ADVERTISEMENT

ಡಿ. 4ರಂದು ಕನ್ನಡ ನುಡಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 20:31 IST
Last Updated 30 ನವೆಂಬರ್ 2022, 20:31 IST

ಬೆಂಗಳೂರು: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯಿಂದ ಡಿ. 4ರಂದು ‘ಕನ್ನಡ ನುಡಿ ಸಮ್ಮೇಳನ’ವನ್ನು ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನವನ್ನು ಗೊ.ರು. ಚನ್ನಬಸಪ್ಪ ಉದ್ಘಾಟಿಸಲಿದ್ದು,ಕನ್ನಡ ನುಡಿ ಸಮ್ಮೇಳನದ ಅಧ್ಯಕ್ಷರಾದ ಟಿ. ತಿಮ್ಮೇಗೌಡ, ಪಿ. ರಾಮಯ್ಯ, ಟಿ. ಸತೀಶ್ ಜವರೇಗೌಡ, ಸೂರಿ ಮೀರಡೆ ಭಾಗವಹಿಸಲಿದ್ದಾರೆ.

ಸಾಹಿತ್ಯ ಕ್ಷೇತ್ರದ ಎಂ.ಎಸ್. ಆಶಾದೇವಿ ಮತ್ತು ಡಿ.ಸಿ. ರಾಮಚಂದ್ರ, ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದ ಮುಕ್ತಾ.ಬಿ. ಕಾಗಲಿ, ಸಾರ್ವಜನಿಕ ಆಡಳಿತ ಕ್ಷೇತ್ರದ ಡಿ.ಎಂ. ಸತೀಶ್‌ಕುಮಾರ್, ಎಚ್.ಸಿ. ಗಿರೀಶ್, ಪಿ. ಶಿವಕುಮಾರ್ ಮತ್ತು ಎನ್. ವಿಜಯಕುಮಾರ್, ನ್ಯಾಯಾಂಗ ಕ್ಷೇತ್ರದ ಎಂ.ವಿ. ರೇವಣಸಿದ್ದಯ್ಯ, ಸಂಘಟನಾ ಕ್ಷೇತ್ರದ ಆರ್.ಬಿ. ಶಂಕರ್‌ ಮತ್ತು ಸಮಾಜ ಸೇವಾ ಕ್ಷೇತ್ರದ ಸಿ.ಪಿ. ಉಮೇಶ ಅವರಿಗೆ ಕದಂಬ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮ್ಮೇಳನದಲ್ಲಿ ವಿವಿಧ ಸಾಹಿತಿಕ ಗೋಷ್ಠಿಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.