ADVERTISEMENT

ಬಾಗಲಗುಂಟೆ: ಗುರು ಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:52 IST
Last Updated 22 ಜುಲೈ 2019, 19:52 IST
ವಿದ್ಯಾರ್ಥಿಗಳು ಗುರುಗಳ ಪಾದಕ್ಕೆ ಪೂಜೆ ಸಲ್ಲಿಸಿದರು
ವಿದ್ಯಾರ್ಥಿಗಳು ಗುರುಗಳ ಪಾದಕ್ಕೆ ಪೂಜೆ ಸಲ್ಲಿಸಿದರು   

ಪೀಣ್ಯದಾಸರಹಳ್ಳಿ: ‘ಶಿಕ್ಷಕರು ಶಿಸ್ತು ಬದ್ಧತೆ, ನೈತಿಕತೆ, ಆತ್ಮವಿಶ್ವಾಸ, ಮೌಲ್ಯಗಳನ್ನು ಬೋಧಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗುವಂತೆ ಹರಸುತ್ತಾರೆ’ ಎಂದು ಗೌಡಿಮಠದ ಸಚ್ಚಿನಂದನ್ ದಾಸ್ ಸ್ವಾಮೀಜಿ ಹೇಳಿದರು.

ಬಾಗಲಗುಂಟೆಯ ಆಚಾರ್ಯ ಗುರುಕುಲ ವಿದ್ಯಾಮಂದಿರ ಶಾಲೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳಲ್ಲಿ ಸೃಜನಶೀಲ ಅಭಿವ್ಯಕ್ತಿ ಮತ್ತು ಅಂತರ್ಗತ ಜ್ಞಾನವನ್ನು ಜಾಗೃತಗೊಳಿಸುವುದೇ ಶಿಕ್ಷಕನ ಅತ್ಯಂತ ಶ್ರೇಷ್ಠ ಕಲೆ’ ಎಂದು ಹೇಳಿದರು.

ADVERTISEMENT

ಶಾಲೆಯ ಸಂಸ್ಥಾಪಕ ಆಚಾರ್ಯ ವೆಂಕಟೇಶ್‌ ಕುಮಾರ್‌, ‘ಶಿಕ್ಷಕರೆಂದರೆ ಪುಸ್ತಕ ಹಿಡಿದು ಪಾಠ ಮಾಡುವವರಲ್ಲ. ಪಠ್ಯಗಳ ಸಾರವನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಯಲು ಪ್ರೇರೇಪಿಸಿ ಚೈತನ್ಯ ತುಂಬುವ ಶಕ್ತಿ’ ಎಂದು ಹೇಳಿದರು.

ಪ್ರಾಂಶುಪಾಲರಾದ ಕಾವ್ಯ ಸಂಜೀವಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.