ADVERTISEMENT

ಪೊಲೀಸರ– ಯೋಧರ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 22:08 IST
Last Updated 26 ಸೆಪ್ಟೆಂಬರ್ 2020, 22:08 IST
ನಿವೃತ್ತ ಪೊಲೀಸರು ಮತ್ತು ಯೋಧರನ್ನು ಸನ್ಮಾನಿಸಲಾಯಿತು. ಶಂಕರ ಬಿದರಿ, ಆರ್‌.ಮಂಜುನಾಥ್‌ ಇದ್ದರು.
ನಿವೃತ್ತ ಪೊಲೀಸರು ಮತ್ತು ಯೋಧರನ್ನು ಸನ್ಮಾನಿಸಲಾಯಿತು. ಶಂಕರ ಬಿದರಿ, ಆರ್‌.ಮಂಜುನಾಥ್‌ ಇದ್ದರು.   

ಪೀಣ್ಯ ದಾಸರಹಳ್ಳಿ: ‘ನಿವೃತ್ತ ಪೊಲೀಸರ ಮತ್ತು ಯೋಧರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಸ್ಫೂರ್ತಿದಾಯಕ ಸಂದೇಶ ನೀಡ ಲಾಗಿದೆ’ ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಹೇಳಿದರು.

ಆಧ್ಯ ಫೌಂಡೇಷನ್‌ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪೊಲೀಸರ ಮತ್ತು ಯೋಧರ ಸಮ್ಮಿಲನ ಸಮಾರಂಭದಲ್ಲಿ ಮಾತನಾಡಿದರು.

‘ನಾಗರಿಕರೆಲ್ಲರೂ ಶಾಂತಿ ಸಹಬಾಳ್ವೆ ಕಾಪಾಡಿಕೊಂಡು ಸಮ ನ್ವಯದಿಂದ ಬಾಳಬೇಕು‘ ಎಂದರು.

ADVERTISEMENT

ಶಾಸಕ ಆರ್.ಮಂಜುನಾಥ್, ’ದೇಶದಲ್ಲಿ ಆಂತರಿಕ ಭದ್ರತೆಯಲ್ಲಿ ಪೊಲೀಸರು ಮತ್ತು ಗಡಿಯಲ್ಲಿ ಯೋಧರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತವರನ್ನು ಗುರುತಿಸುವುದು ನಮ್ಮ ಕರ್ತವ್ಯ‘ ಎಂದರು.

ನಿವೃತ್ತ ಪೊಲೀಸ್ ಅಧಿಕಾ ರಿಗಳಾದ ಗುರುದತ್, ಶಿವಣ್ಣ, ರಂಗ ಸ್ವಾಮಿ, ಜೆಡಿಎಸ್ ಮುಖಂಡರಾದ ಎಚ್.ಎನ್. ಗಂಗಾಧರ್, ಬಿ.ಎನ್. ಜಗದೀಶ್, ಎಚ್.ಆರ್. ಪ್ರಕಾಶ್, ಕೆ.ಸಿ. ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.