ADVERTISEMENT

ಪೂಜೆ ನೆಪದಲ್ಲಿ ಅರ್ಚಕರ ಖಾತೆಗೆ ಕನ್ನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:43 IST
Last Updated 3 ಜುಲೈ 2020, 16:43 IST

ಬೆಂಗಳೂರು: ಪೂಜೆ ನೆಪದಲ್ಲಿ ಸೈಬರ್ ವಂಚಕನೊಬ್ಬ, ನಗರದ ಅರ್ಚಕರೊಬ್ಬರ ಖಾತೆಗೆ ಕನ್ನಹಾಕಿದ್ದಾನೆ. ಈ ಸಂಬಂಧ ದಕ್ಷಿಣ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ಸ್ಥಳೀಯ ನಿವಾಸಿ ದಿನೇಶ್ ಭಟ್ ಎಂಬುವರು ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೂನ್ 27ರಂದು ದಿನೇಶ್ ಅವರಿಗೆ ಕರೆ ಮಾಡಿದ್ದ ಅಪರಿಚಿತ, ತಮ್ಮ ಮನೆಯಲ್ಲಿ ಪೂಜೆ ಇರುವುದಾಗಿ ಹೇಳಿದ್ದ. ಪೂಜೆ ನೆರವೇರಿಸಿದರೆ ₹5 ಸಾವಿರ ಪಾವತಿಸುವುದಾಗಿಯೂ ತಿಳಿಸಿದ್ದ. ಅದಕ್ಕೆ ದಿನೇಶ್ ಒಪ್ಪಿದ್ದರು.’

ADVERTISEMENT

‘ಮುಂಗಡವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದ ಆರೋಪಿ, ಹಣ ವರ್ಗಾವಣೆ ಸೋಗಿನಲ್ಲಿ ಕ್ಯೂಆರ್ ಕೋಡ್ ಕಳುಹಿಸಿದ್ದ. ಅದನ್ನು ದಿನೇಶ್ ಅವರು ಸ್ಕ್ಯಾನ್ ಮಾಡಿದ್ದರು. ಕ್ಷಣಮಾತ್ರದಲ್ಲೇ ಬ್ಯಾಂಕ್ ಖಾತೆಯಿಂದ ₹20 ಸಾವಿರ ಕಡಿತವಾಗಿದೆ. ನಂತರ, ಆರೋಪಿ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.