ADVERTISEMENT

ಕಳಪೆ ಸೈಕಲ್‌: ದಂಡ ವಸೂಲಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 16:31 IST
Last Updated 8 ಜನವರಿ 2020, 16:31 IST

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಸೈಕಲ್‌ ಪೂರೈಸಿದಮಾರಾಟಗಾರರು, ಟೆಂಡರ್‌ನಲ್ಲಿ ನಮೂದಿಸಿದ ಕೆಲವೊಂದು ಮಾನದಂಡಗಳನ್ನುಪೂರೈಸದೆ ಇರುವ ಕಾರಣ ಅವರಿಂದ ದಂಡ ವಸೂಲಿಗೆ ಸರ್ಕಾರ ಕ್ರಮ ಕೈಗೊಂಡಿದೆ.

ಮಕ್ಕಳಿಗೆ ಪೂರೈಸಲಾದ ಸೈಕಲ್‌ಗಳಲ್ಲಿನ ತೊಂದರೆಗಳ ಕುರಿತಂತೆ ಪರಿಶೀಲನೆ ನಡೆಸಿದ ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರ ಆಧಾರದಲ್ಲಿ ಪೂರೈಕೆದಾರರಿಗೆ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್‌ ತಿಳಿಸಿದ್ದಾರೆ.

‘ಕೆಲವೊಂದು ಮಾನದಂಡಗಳನ್ನು ಮಾತ್ರ ಪೂರೈಸಿಲ್ಲ, ಹೀಗಾಗಿ ಸೈಕಲ್‌ನ ಒಟ್ಟಾರೆ ಗುಣಮಟ್ಟದ ಮೇಲೆ ಅಂತಹ ಪರಿಣಾಮ ಬೀರಿಲ್ಲ. ಸರ್ಕಾರಕ್ಕೆ ತಜ್ಞರ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಬಳಿಕ ದಂಡದ ಮೊತ್ತವನ್ನು ಕಡಿತಗೊಳಿಸಿ ಪೂರೈಕೆದಾರರ ಬಿಲ್‌ ಪಾವತಿ ಮಾಡಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

2019–20ನೇ ಸಾಲಿನಲ್ಲಿ ₹ 180 ಕೋಟಿ ವೆಚ್ಚದಲ್ಲಿ 5.04 ಲಕ್ಷ ಸೈಕಲ್‌ಗೆ ಟೆಂಡರ್‌ ಕರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.