ADVERTISEMENT

ನಾಳೆಯಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 20:21 IST
Last Updated 14 ಸೆಪ್ಟೆಂಬರ್ 2020, 20:21 IST

ಬೆಂಗಳೂರು: ಬೆಸ್ಕಾಂನ ವಿವಿಧ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಸೆ.16ರಿಂದ 21ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆ
ತಿಳಿಸಿದೆ.

ವ್ಯತ್ಯಯವಾಗುವ ಸ್ಥಳಗಳು:16ರಂದು ಪರಿಮಳನಗರ, ಮುನೇಶ್ವರ ಬ್ಲಾಕ್, ಲಗ್ಗೆರೆ ಮುಖ್ಯರಸ್ತೆ, ಲವಕುಶನಗರ, ರಾಜೀವ್‍ಗಾಂಧಿ ನಗರ, ಸೊಣ್ಣಪ್ಪ ರಸ್ತೆ, ಜಿ.ಜಿ.ಪಾಳ್ಯ, ತಿಗಳರಪಾಳ್ಯ ಮುಖ್ಯರಸ್ತೆ,ಪರ್ಲ್ ರಸ್ತೆ, ಪೀಣ್ಯ 2ನೇ ಹಂತ, ಭೂಪಸಂದ್ರ
ಮುಖ್ಯರಸ್ತೆ, ಬಸವೇಶ್ವರ ಬಡಾವಣೆ, ನಾಗಶೆಟ್ಟಿಹಳ್ಳಿ, ಕೆ.ಎಸ್.ಬಡಾವಣೆ, ಬೈರವೇಶ್ವರ ನಗರ, ಸಿಲ್ಕ್ ಬೋರ್ಡ್, ಬಿಟಿಎಂ 2ನೇ ಹಂತ, ಜಿ.ಜಿ.ಪಾಳ್ಯ ಪೊಲೀಸ್ ಚೌಕಿರಸ್ತೆ, ಅರಮನೆ ಹೋಟೆಲ್ ರಸ್ತೆ.

18ರಂದು ದುಗ್ಗಲಮ್ಮ ಬಡಾವಣೆ, ಎಂಎಸಿ ಬಡಾವಣೆ, 19ರಂದು ಮಲ್ಲಸಂದ್ರ, ಬೃಂದಾವನ ಬಡಾವಣೆ, ಬಿಎಚ್‍ಇಎಲ್ ಮಿನಿ ಕಾಲೊನಿ, ಪೈಪ್‍ಲೈನ್ ರಸ್ತೆ, ದಾಸರಹಳ್ಳಿ, ಕೆಂಪೇಗೌಡ ಬಡಾವಣೆ, ಎನ್‍.ಎಸ್ ಬಡಾವಣೆ, ಶೆಟ್ಟಿಹಳ್ಳಿ, 20ರಂದು ತಿಗಳರಪಾಳ್ಯ ಮುಖ್ಯರಸ್ತೆ, 21ರಂದು ಬೋನ್‍ವೀಲ್ ಪ್ರದೇಶ, ಚಿಕ್ಕಸಂದ್ರ ಬಡಾವಣೆ, ಸಪ್ತಗಿರಿ ಬಡಾವಣೆ ಹಾಗೂ ಸುತ್ತಮುತ್ತಲಿನ
ಪ್ರದೇಶಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.