ADVERTISEMENT

‘ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ 28ಕ್ಕೆ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 21:01 IST
Last Updated 23 ಜುಲೈ 2022, 21:01 IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಜುಲೈ 28ಕ್ಕೆ ವರ್ಷ ಪೂರೈಸುತ್ತಿದ್ದು, ಗೋವುಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ ‘ಪುಣ್ಯಕೋಟಿ ದತ್ತು ಯೋಜನೆ’ಗೆ ಅದೇ ದಿನ ಚಾಲನೆ ನೀಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ ತಿಳಿಸಿದರು.

ಶನಿವಾರ ಮಾತನಾಡಿದ ಅವರು, ‘ಗೋಶಾಲೆ ಗಳಲ್ಲಿ ಇರುವ ಗೋವುಗಳನ್ನು ಸಾರ್ವಜನಿಕರು ದತ್ತು ತೆಗೆದುಕೊಳ್ಳಲು ಈ ಯೋಜನೆ ಅವಕಾಶ ಕಲ್ಪಿಸಲಿದೆ. ರಾಷ್ಟ್ರದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ. ರಾಜ್ಯದಲ್ಲಿರುವ 215 ಖಾಸಗಿ ಗೋಶಾಲೆಗಳು ಮತ್ತು ಸರ್ಕಾರದಿಂದ ಆರಂಭಿಸುತ್ತಿರುವ 100 ಗೋಶಾಲೆಗಳಲ್ಲಿ ಆಶ್ರಯ ನೀಡುವ ಗೋವುಗಳ ಸಾಕಾಣಿಕೆಗೆ ನೆರವಾಗಲಿದೆ’ ಎಂದರು.

ಪುಣ್ಯಕೋಟಿ ದತ್ತು ಯೋಜನೆಗಾಗಿ ಇಲಾಖೆಯಿಂದ ಪ್ರತ್ಯೇಕ ವೆಬ್‌ ಪೋರ್ಟಲ್‌ ರೂಪಿಸಲಾಗಿದೆ. ಅದರಲ್ಲಿ ಗೋಶಾಲೆಗಳಲ್ಲಿರುವ ಎಲ್ಲ ಗೋವುಗಳ ಮಾಹಿತಿ ಪ್ರಕಟಿಸಲಾಗುವುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.