ADVERTISEMENT

ರೈತ ಸಂಘದ ಕುರ್ಚಿ ಖಾಲಿ ಇಲ್ಲ: ಕೋಡಿಹಳ್ಳಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 19:51 IST
Last Updated 25 ಜೂನ್ 2022, 19:51 IST
   

ಬೆಂಗಳೂರು: ‘ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕುರ್ಚಿ ಖಾಲಿ ಇಲ್ಲ. ಈಗಲೂ ನಾನೇ ರೈತ ಸಂಘದ ಅಧ್ಯಕ್ಷ’ ಎಂದು ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

‘ಕೋಡಿಹಳ್ಳಿ ಅವರು ಹಸಿರು ಟವೆಲ್ ಧರಿಸಬಾರದು ಎಂದು ಹೇಳಿರುವ ಎಚ್.ಆರ್.ಬಸವರಾಜಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರೈತ ಸಂಘದ ರಶೀದಿಗಳ ದುರ್ಬಳಕೆ ಮತ್ತು ಕಬ್ಬಿನ ಹಣದಲ್ಲಿ ನಡೆದ ಭ್ರಷ್ಟಾಚಾರ ಆರೋಪದ ಮೇಲೆ 2016ರಲ್ಲಿ ರೈತ ಸಂಘದಿಂದ ಅವರನ್ನು ತೆಗೆದು
ಹಾಕಲಾಗಿದೆ. ಯಾರೂ ಆರೋಪಿಗಳು ಬಂದು ನನ್ನ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದೆ. ಆದರೆ ಯಾವ ಸರ್ಕಾರಗಳು ಪಾಲನೆ ಮಾಡುತ್ತಿಲ್ಲ. ರಾಜ್ಯದ ಪ್ರಮುಖ ಬೆಳೆಗಳು ಎಂಎಸ್‌ಪಿಗಿಂತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯ ಸರ್ಕಾರ ರೈತರಿಗೆ ಗೊಬ್ಬರದ ಕೊರತೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲ ದಿದ್ದರೆ ರೈತರು ಬೀದಿಗೆ ಬರ
ಬೇಕಾಗುತ್ತದೆ. ಮತ್ತೊಮ್ಮೆ ಹಾವೇರಿ ಗೋಲಿಬಾರ್‌ನಂತಹ ಕರಾಳ ಘಟನೆ ಮರುಕಳಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.