ADVERTISEMENT

ಪುಲ್ವಾಮಾ ಹುತಾತ್ಮರಿಗೆ ಚಿತ್ರ ನಮನ 14ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 17:43 IST
Last Updated 11 ಫೆಬ್ರುವರಿ 2022, 17:43 IST
   

ಬೆಂಗಳೂರು: ಬೆಲ್ವಾಲ ಎಜುಕೇಷನ್ ಚಾರಿಟಬಲ್ ಟ್ರಸ್ಟ್‌ ಹಾಗೂ ಸ್ಟೇಫಿಟ್‌ ಹೆಲ್ತ್‌ ಆ್ಯಂಡ್ ಫಿಟ್ನೆಸ್ ವರ್ಲ್ಡ್‌ ಸಂಸ್ಥೆಗಳ ವತಿಯಿಂದಪುಲ್ವಾಮಾ ದಾಳಿಯ ಹುತಾತ್ಮರ ಸ್ಮರಣೆ ಕಾರ್ಯಕ್ರಮ ಫೆ.14ರಂದು ಸಂಜೆ 5 ಗಂಟೆಗೆ ಬನ್ನೇರುಘಟ್ಟದ ಸ್ಟೇಫಿಟ್‌ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಲ್ವಾಲ ಟ್ರಸ್ಟ್‌ನ ಸಂಸ್ಥಾಪಕ ಸಂಜಯ್ ಬೆಲ್ವಾಲ್, ‘ಪುಲ್ವಾಮಾ ದಾಳಿಯಲ್ಲಿ ಮಡಿದ ಯೋಧರಿಗೆ ಕಲಾ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದ ಹರ್ಷ ಅವರು ಒಂದು ಗಂಟೆಯಲ್ಲಿ ಹುತಾತ್ಮರ 40 ಚಿತ್ರಗಳನ್ನು ರಚಿಸಿ ದಾಖಲೆ ನಿರ್ಮಿಸಲಿದ್ದಾರೆ’ ಎಂದರು.

‘ರಾಷ್ಟ್ರಪ್ರೇಮ ಮೂಡಿಸುವ ಈ ಕಾರ್ಯಕ್ರಮ ಯುಟ್ಯೂಬ್ ವಾಹಿನಿhttps://www.youtube.com/c/ArtistHarrshaArtAcademyನಲ್ಲಿ ನೇರಪ್ರಸಾರಗೊಳ್ಳಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.