ADVERTISEMENT

ಕಮಿಷನ್ ಆರೋಪ ಸುಳ್ಳು: ಆರ್.ಪ್ರಸಾದ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 19:27 IST
Last Updated 20 ಜುಲೈ 2022, 19:27 IST

ಬೆಂಗಳೂರು: ‘ತೋಟಗಾರಿಕೆ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಹನಿ ನೀರಾವರಿ ಅಳವಡಿಸಲು ಮತ್ತು ಸಬ್ಸಿಡಿ ಹಣ ರೈತರಿಗೆ ಬಿಡುಗಡೆ ಮಾಡಲು ಕಮಿಷನ್‌ ಕೇಳಿದ್ದಾರೆ ಎಂದು ಸೂಕ್ಷ್ಮ ಹನಿ ನೀರಾವರಿ ವಿತರಕರ ಸಂಘ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಇರಿಗೇಶನ್ ಅಸೋಸಿಯೇಷನ್ ಆಫ್ ಕರ್ನಾಟಕದ(ಐಎಕೆ) ಅಧ್ಯಕ್ಷ ಆರ್.ಪ್ರಸಾದ್ ಸ್ಪಷ್ಟೀಕರಣ ನೀಡಿದ್ದಾರೆ.

‘ತೋಟಗಾರಿಕೆ ಮತ್ತು ಕೃಷಿ ಇಲಾಖೆಯಲ್ಲಿ ಸಹಾಯಧನ ವಿತರಿಸಲು‘ಫ್ರುಟ್ಸ್ ಮತ್ತು ಹಸಿರು’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗಿದೆ. ಇಲಾಖೆಯ ಮಾರ್ಗಸೂಚಿಯಂತೆ ರೈತರ ತೋಟಗಳಲ್ಲಿ ಸೂಕ್ಷ್ಮ ಹನಿ ನೀರಾವರಿ ವ್ಯವಸ್ಥೆ ಅಳವಡಿಸಲಾಗಿದೆ’ ಎಂದರು.

‘ಸರ್ಕಾರ ಮತ್ತು ಇಲಾಖೆಗೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಸೂಕ್ಷ್ಮ ನೀರಾವರಿ ವಿತರಕ ಸಂಘ ಎಂದು ಹೇಳಿಕೊಂಡು, ಅದು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಅವರು ಪ್ರಕಟಣೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.