ADVERTISEMENT

ಪ್ರಾಥಮಿಕ ಶಾಲೆಯ ದುಸ್ಥಿತಿ: ಶೌಚಾಲಯ ಕೊರತೆ; ವಿದ್ಯಾರ್ಥಿನಿಯರ ಪರದಾಟ

ಚಿಕ್ಕಗೊಲ್ಲರ ಹಟ್ಟಿ ಗ್ರಾಮದ ನಮ್ಮೂರ ಮಾದರಿ ಶಾಲೆ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 21 ಸೆಪ್ಟೆಂಬರ್ 2018, 19:12 IST
Last Updated 21 ಸೆಪ್ಟೆಂಬರ್ 2018, 19:12 IST
ಚಿಕ್ಕಗೊಲ್ಲರ ಹಟ್ಟಿ ಶಾಲೆ
ಚಿಕ್ಕಗೊಲ್ಲರ ಹಟ್ಟಿ ಶಾಲೆ   

ಬೆಂಗಳೂರು: ದಾಸನಪುರ ಹೋಬಳಿ ಚಿಕ್ಕಗೊಲ್ಲರ ಹಟ್ಟಿ ಗ್ರಾಮದ ನಮ್ಮೂರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯದ ಕೊರತೆಯಿದೆ.1980ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಿದೆ.

2018-19ನೇ ಸಾಲಿನಲ್ಲಿ ಶಾಲೆಯ ಒಟ್ಟು ದಾಖಲಾತಿ 461 ಇದೆ. ಈ ಪೈಕಿ 229 ವಿದ್ಯಾರ್ಥಿನಿಯರು ಇದ್ದಾರೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೇವಲ ಎರಡು ಶೌಚಾಲಯ ಇದೆ. ಶೌಚಾಲಯ ಕೇವಲ ಎರಡು. ಇನ್ನು ಎರಡು ಶೌಚಾಲಯಗಳು ಇದ್ದರೂ ಕೂಡ ಅವು ವಿದ್ಯಾರ್ಥಿಗಳ ಉಪಯೋಗಕ್ಕೆ ಬರುವುದಿಲ್ಲ. ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಹೆಣ್ಣುಮಕ್ಕಳ ಪಾಡಂತೂ ಶೋಚನೀಯವಾಗಿದೆ.

‘ಮೂತ್ರ ಬಂದು ತಡೆದು‌ಕೊಂಡಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಪಾಠ ಕೇಳುವ ಆಸಕ್ತಿಯೇ ಇಲ್ಲವಾಗುತ್ತದೆ. ಎಷ್ಟು ಬೇಗ ಗಂಟೆ ಬಾರಿಸುತ್ತಾರೋ ಎಂದು ಕಾಯುವ ಪರಿಸ್ಥಿತಿ ನಮ್ಮದು’ ಎಂದು ವಿದ್ಯಾರ್ಥಿನಿಯೊಬ್ಬಳು ತನ್ನ ನೋವನ್ನು ಬಿಚ್ಚಿಟ್ಟಳು.
ಡಾ.ಚನ್ನಿಗರಾಯಶೆಟ್ಟಿ ಅವರು, ‘ಮಕ್ಕಳು ಮೂತ್ರ ತಡೆದುಕೊಂಡರೆ ಮೂತ್ರಕೋಶದ ಮೇಲೆ ಗಂಭೀರವಾದ ಪರಿಣಾಮ ಉಂಟಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಶೌಚಗುಂಡಿಗಳ ಆಳವೂ ಕಡಿಮೆಯಿದೆ. ತಿಂಗಳಿಗೊಮ್ಮೆ ತುಂಬಿಬಿಡುತ್ತದೆ. ತಿಂಗಳಿಗೊಮ್ಮೆ ಖಾಲಿ ಮಾಡಬೇಕು. ಇಲ್ಲವಾದಲ್ಲಿ ಗಬ್ಬು ವಾಸನೆ ಮಧ್ಯೆ ಪಾಠ ಕೇಳಬೇಕಾದ ವಿದ್ಯಾರ್ಥಿಗಳದ್ದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಉಮೇಶ್ ಪ್ರತಿಕ್ರಿಯಿಸಿ, ‘ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ಕೋರಿದ್ದು ಅದು ಬಂದ ಕೂಡಲೇ ಶೌಚಾಲಯವನ್ನು ನಿರ್ಮಿಸಿ ಕೊಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.