ಯಲಹಂಕ: ವಾರ್ಡ್ ಸಭೆ ಮತ್ತು ಗ್ರಾಮಸಭೆಗಳಲ್ಲಿ ಸ್ಥಳೀಯ ನಾಗರಿಕರು ಕಡ್ಡಾಯವಾಗಿ ಭಾಗವಹಿಸಿ, ಗ್ರಾಮದ ಸಮಸ್ಯೆಗಳು ಮತ್ತು ಮೂಲ ಸೌಕರ್ಯಗಳ ಬೇಡಿಕೆಗಳ ಬಗ್ಗೆ ಸಲಹೆ ನೀಡಬೇಕು. ಆಗ ಸಮಸ್ಯೆಗಳಿಗೆ ಸಭೆಯಲ್ಲೇ ಪರಿಹಾರ ನೀಡಲು ಅನುಕೂಲವಾಗುತ್ತದೆ’ ಎಂದು ದೊಡ್ಡಜಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಬೈರೇಗೌಡ ತಿಳಿಸಿದರು.
ದೊಡ್ಡಜಾಲ ಗ್ರಾಮಪಂಚಾಯಿತಿ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಮೊದಲಸುತ್ತಿನ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾತನಾಡಿದರು.
’ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛಗ್ರಾಮ, ಕಸವಿಲೇವಾರಿ, ಸಿಸಿ ಟಿವಿ ಮತ್ತು ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ, ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ನಮ್ಮ ಮೆಡಿಕಲ್ಸ್ ಸೇರಿ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ’ ಎಂದು ಮಾಹತಿ ನೀಡಿದರು.
ಪಂಚಾಯಿತಿ ಸದಸ್ಯ ಎನ್.ಕೆ.ಮಹೇಶ್‌ಕುಮಾರ್ ಮಾತನಾಡಿ, ‘ವಾರ್ಡ್‌ಮಟ್ಟದ ಸಭೆಗಳಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಗಣಿಸಿ, ಕಾಮಗಾರಿಗಳಿಗೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಅನುಷ್ಟಾನಗೊಳಿಸಲು ನಿರ್ಣಯ ಕೈಗೊಳ್ಳಲಾಗುವುದು’ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ಪ್ರೋತ್ಸಾಹಧನದ ಚೆಕ್ ಹಾಗೂ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಅನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಹಾಗೂ ವಿಶೇಷಚೇತನರಿಗೆ ಸಹಾಯಧನದ ಚೆಕ್ ನೀಡಲಾಯಿತು.
ಪಂಚಾಯಿತಿ ಉಪಾಧ್ಯಕ್ಷೆ ಎ.ಸಿ.ಗೌರಮ್ಮ ಕೃಷ್ಣಪ್ಪ, ಸದಸ್ಯರಾದ ಎಂ.ನಾಗರಾಜ್, ಚೇತನ್‌ಕುಮಾರ್, ನರಸಿಂಹಯ್ಯ, ಎಸ್.ಪ್ರಕಾಶ್, ಹಂಸವೇಣಿ ಮಂಜುನಾಥ್, ಹರಿಪ್ರಕಾಶ್.ಎಂ, ಶೃತಿ ಪುರುಷೋತ್ತಮ್, ಮಾಲಾ.ಎಂ, ರತ್ನಮ್ಮ, ಸೌಭಾಗ್ಯಮ್ಮ, ಗೀತಾ ಶಂಕರ್, ಪಿಡಿಒ ವೆಂಕಟರಂಗನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.