ADVERTISEMENT

ಕ್ರೀಡಾಂಗಣಕ್ಕೆ ಜಮೀನು ನೀಡದ ಸರ್ಕಾರ: ಆರ್.ಕೆ. ರಮೇಶ್

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:32 IST
Last Updated 29 ಮೇ 2022, 19:32 IST
ಆರ್.ಕೆ. ರಮೇಶ್ ಅವರು ಕ್ರೀಡಾಪಟುಗಳಿಗೆ ಶುಭಹಾರೈಸಿದರು
ಆರ್.ಕೆ. ರಮೇಶ್ ಅವರು ಕ್ರೀಡಾಪಟುಗಳಿಗೆ ಶುಭಹಾರೈಸಿದರು   

ಬೆಂಗಳೂರು: ‘ಖಾಸಗಿ ಸಂಸ್ಥೆಗಳಿಗೆ ನೂರಾರು ಎಕರೆ ಜಮೀನು ಮಂಜೂರು ಮಾಡುವ ಸರ್ಕಾರ, ಕ್ರೀಡಾಂಗಣ, ಸಮುದಾಯ ಭವನ, ಶಾಲಾ-ಕಾಲೇಜು, ಆಸ್ಪತ್ರೆಗಳಿಗೆ ಮಾತ್ರ ಜಮೀನು ಮೀಸಲಿಡುತ್ತಿಲ್ಲ’ ಎಂದುಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್)ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್ ಆರೋಪಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರಗದ್ದೆ ಗ್ರಾಮ ಪಂಚಾಯಿತಿಯ ಎಚ್. ವಡ್ಡರಪಾಳ್ಯದಲ್ಲಿ ಶ್ರೀವಿನಾಯಕ ವಾಲಿಬಾಲ್ ತಂಡ ಹಮ್ಮಿಕೊಂಡ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ, ಮಾತನಾಡಿದರು. ‘ಶಿಕ್ಷಣ, ಕ್ರೀಡೆ, ಆರೋಗ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಮೀನಿದ್ದರೂ ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಸುಸಜ್ಜಿತ ಕ್ರೀಡಾಂಗಣ, ಆಟದ ಮೈದಾನವಿಲ್ಲ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯ ಪ್ರಭಾಕರ್, ಸ್ಥಳೀಯಮುಖಂಡರಾದ ಸಂಪತ್ , ಮಂಜು, ದಿನೇಶ್, ಫೃಥ್ವಿ, ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ನಟರಾಜ್, ಮೀನಾ ಮಾರಪ್ಪ, ಎಚ್.ಎಸ್. ಅಶ್ವಥ್, ಇಂದ್ರಶಿವಕುಮಾರ್, ಜಿ. ಶ್ರೀನಿವಾಸ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.