ADVERTISEMENT

ಕಸದ ರಾಶಿ ತುಂಬಿಕೊಂಡ ‘ಜ್ಞಾನ ಭಾರತಿ’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 20:23 IST
Last Updated 11 ಆಗಸ್ಟ್ 2019, 20:23 IST
 ಜ್ಞಾನಭಾರತಿ ಒಂದನೇ ಹಂತದ ಆಶಾಕಿರಣ ಬಡಾವಣೆಯಲ್ಲಿ ಸುರಿದಿರುವ ಕಸದ ರಾಶಿ
 ಜ್ಞಾನಭಾರತಿ ಒಂದನೇ ಹಂತದ ಆಶಾಕಿರಣ ಬಡಾವಣೆಯಲ್ಲಿ ಸುರಿದಿರುವ ಕಸದ ರಾಶಿ   

ರಾಜರಾಜೇಶ್ವರಿನಗರ: ಇಲ್ಲಿನ ಜ್ಞಾನ ಭಾರತಿ ಒಂದನೆಯ ಬ್ಲಾಕ್‌,ಆಶಾಕಿರಣ ಬಡಾವಣೆ ಹಾಗೂ ವಳಗೆರೆ
ಹಳ್ಳಿಯ ಸುತ್ತ ಕಸದ ರಾಶಿಯನ್ನೇ ಸುರಿಯಲಾಗಿದ್ದು, ಕಾಲರಾ, ಡೆಂಗಿಯಂತಹ ಕಾಯಿಲೆಗಳ ಅಪಾಯ ಎದುರಿಸುತ್ತಿದ್ದಾರೆ ಸಾರ್ವಜನಿಕರು.

‘ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಅನಾರೋಗ್ಯಕ್ಕೆ ಈಡಾಗುತ್ತಿದ್ದೇವೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

‘ಬಡಾವಣೆಗಳು ಸೊಳ್ಳೆ, ಕ್ರಿಮಿ ಕೀಟಗಳು, ಹಾವು ಚೇಳುಗಳ ವಾಸಸ್ಥಾನಗಳಾಗಿ ಮಾರ್ಪಟ್ಟಿವೆ.ಕಿಡಿಗೇಡಿ
ಗಳು ಇಲ್ಲಿಗೆ ಕಸ ತಂದು ಬಿಸಾಡುವುದರಿಂದ ದುರ್ವಾಸನೆ ಹೆಚ್ಚಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

ಬಿಬಿಎಂಪಿ ಸದಸ್ಯೆ ಶಾರದಾ ಮುನಿರಾಜು, ‘ಕಸದ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರು ನಿರ್ಲಕ್ಷಿಸುತ್ತಿದ್ದಾರೆ. ಈ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.