ADVERTISEMENT

ಬೆಂಗಳೂರು| ಬಿರುಗಾಳಿ ಸಹಿತ ಸುರಿದ ಮಳೆಗೆ ಧರೆಗುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 9:56 IST
Last Updated 7 ಜೂನ್ 2019, 9:56 IST
   

ಬೆಂಗಳೂರು: ನಗರದ ಹಲವೆಡೆ ಗುರುವಾರ ರಾತ್ರಿ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಮರಗಳು ರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಉರುಳಿ ಬಿದ್ದು ಅಪಾರ ಹಾನಿ ಸಂಭವಿಸಿದೆ.

ಹನುಮಂತನಗರದಪಿಇಎಸ್‌ ಕಾಲೇಜು, ಗಿರಿನಗರ, ಅವಲಹಳ್ಳಿ, ಬಿಡಿಎ ಬಸ್‌ ನಿಲ್ದಾಣ, ದೀಪಾಂಜಲಿನಗರ, ಹೊಸಕೆರೆ ಹಳ್ಳಿಯಲ್ಲಿರಸ್ತೆ, ಮನೆಗಳ ಮೇಲೆ ಮರಗಳು ಬಿದ್ದಿರುವುದರಿಂದಸಂಚಾರ ಸಮಸ್ಯೆ ಉಂಟಾಗಿದೆ.

ಮರಗಳು ಬಿದ್ದ ಪರಿಣಾಮ ಬೈಕ್‌, ಆಟೋ, ಕಾರುಗಳು ಜಖಂ ಗೊಂಡಿವೆ. ಬಿಬಿಎಂಪಿ ಸಿಬ್ಬಂದಿ ಮರಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ADVERTISEMENT
ಮರಗಳು ಮುರಿದು ಅಡ್ಡಾದಿಡ್ಡಿಯಾಗಿ ಬಿದ್ದಿವೆ.
ಬೈಕ್‌ ಮೇಲೆ ಮರ ಬಿದ್ದಿದೆ.
ಪಿಇಎಸ್ ಕಾಲೇಜು ಬಳಿ ಕಾರಿನ ಮೇಲೆ ಮರ ಬಿದ್ದಿದೆ.

ಆರ್‌ಆರ್‌ನಗರ ವ್ಯಾಪ್ತಿಯಲ್ಲಿಯೂ ಹಲವು ಕಡೆ ಮರಗಳು ಬಿದ್ದಿದ್ದು, ವಾಹನಗಳಿಗೆ ಹಾನಿಯಾಗಿದೆ, ವಿದ್ಯುತ್‌ ಕಂಬಗಳೂ ಮುರಿದು ಬಿದ್ದಿವೆ.

ಆರ್‌ಆರ್‌ನಗರ ವ್ಯಾಪ್ತಿ ಮರ, ವಿದ್ಯುತ್‌ ಕಂಬ ಮುರಿದು ಬಿದ್ದಿವೆ.
ಆರ್‌ಆರ್‌ನಗರ ವ್ಯಾಪ್ತಿ ಮರ ಬಿದ್ದು ಕಾರು ಹಾನಿಗೊಳಗಾಗಿದೆ.
ಆರ್‌ಆರ್‌ನಗರ ವ್ಯಾಪ್ತಿ ವಿದ್ಯುತ್‌ ಕಂಬ ಮುರಿದು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.