ADVERTISEMENT

ನಗರದ ಹಲವಡೆ ಗುಡುಗು, ಮಿಂಚು ಸಹಿತ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST
ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ವಿಲ್ಸನ್‌ ಗಾರ್ಡನ್‌ನ ಬಿ.ಟಿ. ಎಸ್. ರಸ್ತೆ ಜಲಾವೃತಗೊಂಡಿತ್ತು –ಪ್ರಜಾವಾಣಿ ಚಿತ್ರ
ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ವಿಲ್ಸನ್‌ ಗಾರ್ಡನ್‌ನ ಬಿ.ಟಿ. ಎಸ್. ರಸ್ತೆ ಜಲಾವೃತಗೊಂಡಿತ್ತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಬುಧವಾರ ರಾತ್ರಿ ಜೋರಾಗಿ ಮಳೆ ಸುರಿಯಿತು.

ಅದರಲ್ಲೂ ಜಕ್ಕೂರು, ಯಲಹಂಕ, ಹೆಬ್ಬಾಳ, ಶಿವಾಜಿನಗರ, ಕೆ.ಆರ್‌. ವೃತ್ತ, ಬನಶಂಕರಿ, ಜೆ.ಪಿ. ನಗರ, ಜಯನಗರ, ಚಾಮರಾಜಪೇಟೆ, ಶ್ರೀರಾಮಪುರ, ಮೆಜೆಸ್ಟಿಕ್, ರಾಜಾಜಿನಗರ, ಸಂಪಂಗಿರಾಮನಗರ, ಕೋರಮಂಗಲ, ಶಾಂತಿನಗರ, ಯಶವಂತಪುರ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.

ಬಹುತೇಕ ಭಾಗಗಳಲ್ಲಿ ರಾತ್ರಿ 9.30ರಿಂದ ಗುಡುಗು, ಮಿಂಚು ಸಹಿತ ಆರಂಭವಾದ ಮಳೆ ರಾತ್ರಿ 11 ಗಂಟೆವರೆಗೆ ಸುರಿದಿದೆ. ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವಾಹನ ಸವಾರರು ದಿಢೀರ್‌ ಸುರಿದ ಮಳೆಯಲ್ಲಿ ಸಿಲುಕಿಕೊಂಡರು.

ADVERTISEMENT

ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ದಟ್ಟಣೆ ಉಂಟಾಯಿತು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಸಂಪಂಗಿರಾಮನಗರದಲ್ಲಿ ಬುಧವಾರ ರಾತ್ರಿ 10.45ಕ್ಕೆ 10 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.