ಪೀಣ್ಯ ದಾಸರಹಳ್ಳಿ: ಶುಕ್ರವಾರ ಸಂಜೆ 6.30 ರ ಸುಮಾರಿಗೆ ಸುರಿದ ಧಾರಾಕಾರ ಮಳೆಯಿಂದ ತಕ್ಕಸಂದ್ರ ಕೆರೆ ರಸ್ತೆ, ಶೆಟ್ಟಿಹಳ್ಳಿ ಬಾಬಣ್ಣ ಬಡಾವಣೆ ಕೆಲವು ತಗ್ಗು ಪ್ರದೇಶಗಳು ಜಲಾವೃತವಾಗಿ ವಾಹನ ಸಂಚಾರಿಸಲು ಅಡಚಣೆಯಾಯಿತು.
ಅರ್ಧ ಗಂಟೆ ಬಳಿಕ ನೀರು ಹರಿದು ರಸ್ತೆ ಸಂಚಾರ ಸುಗಮವಾಯಿತು. ಮಲ್ಲಸಂದ್ರ, ಕಲ್ಯಾಣನಗರ ಸೌಂದರ್ಯ ಬಡಾವಣೆ ಸಿಡೇದಹಳ್ಳಿ ಸುಂಕದಕಟ್ಟೆ ಪೀಣ್ಯ 2ನೇ ಹಂತ ಹೆಗ್ಗನಹಳ್ಳಿ ರಾಜಗೋಪಾಲನಗರ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿ ಜನರು ಪರದಾಡುವಂತಾಯಿತು.
ಸೌಂದರ್ಯ ಬಡಾವಣೆಯಲ್ಲಿ ಜೋರು ಗಾಳಿ ಮತ್ತು ಸುರಿದ ಮಳೆಗೆ ಮರ ಬಿದ್ದಿದೆ. ಸಿಡೇದಹಳ್ಳಿ ರಸ್ತೆ ಪಿಕೆ ಬೇಕರಿ ಹತ್ತಿರ ಮರದ ಕೊಂಬೆ, ಸಿದ್ದೇಶ್ವರ ಬಡಾವಣೆ ಮರದ ಕೊಂಬೆ ಹಾವನೂರು ಬಡಾವಣೆ ಮರದ ಕೊಂಬೆಗಳು ಬಿದ್ದಿವೆ. ಎಜಿಬಿ ಬಡಾವಣೆ, ಡಿಫೆನ್ಸ್ ಕಾಲೋನಿ ಗೃಹಲಕ್ಷ್ಮಿ ಬಡಾವಣೆ, ಶೆಟ್ಟಿಹಳ್ಳಿ ರಾಘವೇಂದ್ರ ಬಡಾವಣೆಯಲ್ಲಿ ಮರಗಳು ಬಿದ್ದಿದೆ. ಬಿಬಿಎಂಪಿ ಅರಣ್ಯ ಅಧಿಕಾರಿಗಳು ಮರಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.