ADVERTISEMENT

ರ‍್ಯಾಲಿ ಫಾರ್‌ ರಿವರ್‌ಗೆ ‘ವಾಟರ್‌ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 19:27 IST
Last Updated 25 ಫೆಬ್ರುವರಿ 2019, 19:27 IST
ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಈಶಾ ಫೌಂಡೇಷನ್‌ ಸ್ವಯಂಸೇವಕ ವಿಕ್ರಂಜೀತ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಯು.ಪಿ.ಸಿಂಗ್‌ ಇದ್ದಾರೆ
ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಈಶಾ ಫೌಂಡೇಷನ್‌ ಸ್ವಯಂಸೇವಕ ವಿಕ್ರಂಜೀತ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಯು.ಪಿ.ಸಿಂಗ್‌ ಇದ್ದಾರೆ   

ಬೆಂಗಳೂರು:ನದಿಗಳ ಸಂರಕ್ಷಣೆಗೆ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದ ಈಶಾ ಫೌಂಡೇಷನ್‌ ಆರಂಭಿಸಿದ್ದ ರ‍್ಯಾಲಿ ಫಾರ್‌ ರಿವರ್‌‌ (ನದಿಗಾಗಿ ಜಾಥಾ) ಜಾಗೃತಿ ಅಭಿಯಾನಕ್ಕೆ ಕೇಂದ್ರ ಜಲಸಂಪನ್ಮೂಲ ಇಲಾಖೆಯ 2018ರ ಸಾಲಿನರಾಷ್ಟ್ರೀಯ ‘ವಾಟರ್‌’ ಪ್ರಶಸ್ತಿ ದೊರೆತಿದೆ.

ಸಮೂಹ ಜಾಗೃತಿ ಪ್ರಯತ್ನಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ನವದೆಹಲಿಯಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ಸೋಮವಾರಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಯು.ಪಿ.ಸಿಂಗ್ ಉಪಸ್ಥಿತರಿದ್ದರು.

ADVERTISEMENT

ನದಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದುಮತ್ತು ನದಿಗಳಪುನಶ್ಚೇತನಕ್ಕೆ ಸಮಗ್ರ ಯೋಜನೆ ಒದಗಿಸುವ ಉದ್ದೇಶದೊಂದಿಗೆ 2017ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ರ‍್ಯಾಲಿಯನ್ನು ಪ್ರಾರಂಭಿಸಲಾಗಿತ್ತು. ಸುಮಾರು 162 ಮಿಲಿಯನ್‌ ಜನ ಭಾಗವಹಿಸಿದ್ದರು. ಅಕ್ಟೋಬರ್‌ 2ರಂದು ದೆಹಲಿಯಲ್ಲಿ ರ‍್ಯಾಲಿಕೊನೆಗೊಂಡಿತ್ತು. ಈ ಮೂಲಕ ಅದುಅತಿದೊಡ್ಡ ಪರಿಸರ ಚಳುವಳಿ ಎನ್ನುವ ಕೀರ್ತಿಗೆ ಪಾತ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.