ADVERTISEMENT

ಮಾರ್ಚ್‌ 27ರಿಂದ ರಾಮನವಮಿ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 20:49 IST
Last Updated 1 ಜನವರಿ 2026, 20:49 IST
<div class="paragraphs"><p>ರಾಮನವಮಿ&nbsp;ಸಂಗೀತೋತ್ಸವ</p></div>

ರಾಮನವಮಿ ಸಂಗೀತೋತ್ಸವ

   

ಬೆಂಗಳೂರು: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್‌ ಮಾರ್ಚ್‌ 27ರಿಂದ ಏಪ್ರಿಲ್ 22ರವರೆಗೆ ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ‘88ನೇ ಶ್ರೀ ರಾಮನವಮಿ ಸಂಗೀತೋತ್ಸವ’ ಹಮ್ಮಿಕೊಂಡಿದೆ.

ಈ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು, ವೀಣೆ, ಪಿಟೀಲು, ಕೊಳಲು ಸೇರಿ ವಿವಿಧ ವಾದ್ಯಗಳ ವಾದಕರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಮಾರ್ಚ್‌ 27ರಂದು ಬೆಳಿಗ್ಗೆ 8.30ರಿಂದ ರಾಮನವಮಿ ಮಹಾ ಅಭಿಷೇಕ ನಡೆಯಲಿದೆ. ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. 

ADVERTISEMENT

ಸಂಗೀತೋತ್ಸವದಲ್ಲಿ ಮಲ್ಲಾಡಿ ಸಹೋದರರು, ರಾಮಕೃಷ್ಣನ್ ಮೂರ್ತಿ, ವಿದ್ಯಾಭೂಷಣ್, ಶಿವಶ್ರೀ ಸ್ಕಂದಪ್ರಸಾದ್, ಸಂದೀಪ್ ನಾರಾಯಣ್, ರಂಜನಿ ಮತ್ತು ಗಾಯತ್ರಿ, ಸುಮಾ ಸುಧೀಂದ್ರ, ತ್ರಿಚೂರ್ ಸಹೋದರರು, ರವೀಂದ್ರ ಯಾವಗಲ್, ವೆಂಕಟೇಶ್ ಕುಮಾರ್, ಎಸ್. ಸಾಕೇತರಾಮನ್, ಪ್ರವೀಣ್ ಗೋಡ್ಖಿಂಡಿ, ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಸೇರಿ ಸಂಗೀತ ಕ್ಷೇತ್ರದ ಪ್ರಮುಖ ಗಾಯಕರು ಹಾಗೂ ಕಲಾವಿದರು ಕ‌ಛೇರಿ ನಡೆಸಿಕೊಡಲಿದ್ದಾರೆ. 

www.ramanavamitickets.com ವೆಬ್‌ಸೈಟ್‌ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ವಿವರಕ್ಕೆ 9448079079 ಅಥವಾ 9483518012ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.