ADVERTISEMENT

ಅತ್ಯಾಚಾರ: ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 16:19 IST
Last Updated 17 ಅಕ್ಟೋಬರ್ 2025, 16:19 IST
<div class="paragraphs"><p>ಅತ್ಯಾಚಾರ</p></div>

ಅತ್ಯಾಚಾರ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಐಸ್‌ಕ್ರೀಂ ಹಾಗೂ ಚಾಕೊಲೇಟ್‌ ‌ಕೊಡಿಸುವ ನೆಪದಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ‌ಯಾಗಲು ಕಾರಣವಾಗಿರುವ ಬಾಲಕನೊಬ್ಬನ ವಿರುದ್ಧ ಪೋಕ್ಸೊ(ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆ ಅಡಿ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ರಾಜಸ್ಥಾನದ ಬಾಲಕ ಮತ್ತು ನೇಪಾಳದ ಸಂತ್ರಸ್ತೆ ಶಂಕರಪುರ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಪಿಯುಸಿ ಓದುತ್ತಿದ್ದ ಬಾಲಕನಿಗೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ಇತ್ತೀಚೆಗೆ ಬಾಲಕಿಗೆ ಐಸ್‌ಕ್ರೀಂ, ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿದ ಬಾಲಕ, ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ನಂತರ, ಕಳೆದ 3 ತಿಂಗಳಿಂದ ಬಾಲಕಿಯ ಜೊತೆಗೆ ಆತ ಮಾತು ಬಿಟ್ಟಿದ್ದ. ಇತ್ತ ಗುರುವಾರ ಬಾಲಕಿ ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಹುಟ್ಟಿದ ಕೂಡಲೇ ಮಗು ಮೃತ ಪಟ್ಟಿತ್ತು. ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.